(ನ್ಯೂಸ್ ಕಡಬ) newskadaba.com ಕಡಬ, ಡಿ.20. ಸರಕಾರದ ಅನುದಾನದಲ್ಲಿ ನಡೆಯುವ ಕಾಮಗಾರಿಗಳು ಸುಸೂತ್ರವಾಗಿ ಮತ್ತು ಗುಣಮಟ್ಟದ ಕೊರತೆಯಾಗದಂತೆ ನಡೆಯಲು ಸ್ಥಳೀಯ ಜನರು ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸುಳ್ಯ ಶಾಸಕ ಎಸ್.ಅಂಗಾರ ಅವರು ನುಡಿದರು.
ಅವರು ಕರ್ನಾಟಕ ಅಲ್ಪಸಂಖ್ಯಾತ ಕಾಲನಿಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿ ಯೋಜನೆಯಡಿಯಲ್ಲಿ 08 ಲಕ್ಷ ರೂ. ಅನುದಾನದಲ್ಲಿ ನಡೆಯಲಿರುವ ಕುಟ್ರುಪ್ಪಾಡಿ ಗ್ರಾಮದ ಕಳಾರ-ಅಡ್ಕಾಡಿ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಕಾಮಗಾರಿ ನಡೆಯುವ ವೇಳೆ ಸ್ಥಳೀಯವಾಗಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಸ್ಥಳೀಯ ಮುಖಂಡರು ಮುಂದಾಗಬೇಕು. ಮುಖ್ಯವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಯ ವೇಳೆ ರಸ್ತೆಯ ಅಕ್ಕಪಕ್ಕದ ಜಮೀನಿನ ಮಾಲಕರು ಕಾಮಗಾರಿಗೆ ಅಡ್ಡಿಪಡಿಸುವುದು ಎಲ್ಲೆಡೆ ಎದುರಾಗುವ ಸಮಸ್ಯೆ. ಊರಿನ ಅಭಿವೃದ್ಧಿ ಮತ್ತು ಸಾರ್ವಜನಿಕರ ಅನುಕೂಲತೆಯ ದೃಷ್ಟಿಯಿಂದ ಇಂತಹ ಸಂದರ್ಭಗಳಲ್ಲಿ ಜನರು ಹೊಂದಾಣಿಕೆಯಿಂದ ಕಾಮಗಾರಿಗೆ ಅನುವು ಮಾಡಿಕೊಬೇಕು. ಹಾಗೆಯೇ ರಸ್ತೆಯ ಕಾಮಗಾರಿ ನಡೆದ ಮೇಲೆ ರಸ್ತೆಯ ಪಕ್ಕದ ಚರಂಡಿಗಳನ್ನು ಮುಚ್ಚಿ ಮಳೆನೀರು ರಸ್ತೆಗೆ ಬಂದು ರಸ್ತೆ ಹಾಳಾಗದಂತೆ ಕಾಪಾಡಿಕೊಳ್ಳುವುದು ಕೂಡ ರಸ್ತೆಯ ಫಲಾನುಭವಿಗಳ ಕರ್ತವ್ಯ ಎಂದು ಅವರು ಕಿವಿಮಾತು ಹೇಳಿದರು.
ಬಿಜೆಪಿ ಜಿಲ್ಲಾ ಸಮಿತಿಯ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಪುತ್ತೂರು ಎಪಿಎಂಸಿ ಸದಸ್ಯೆ ಪುಲಸ್ತ್ಯಾ ರೈ, ತಾ.ಪಂ.ಸದಸ್ಯೆ ಪಿ.ವೈ.ಕುಸುಮಾ,ಬಿಜೆಪಿ ಕಡಬ ಶಕ್ತಿಕೇಂದ್ರದ ಮಾಜಿ ಅಧ್ಯಕ್ಷ ಸತೀಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್.ಕೆ., ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸುಳ್ಯ ಮಂಡಲ ಕಾರ್ಯದರ್ಶಿ ಫಯಾಝ್ ಕಡಬ, ಕಡಬ ಗ್ರಾ.ಪಂ.ಸದಸ್ಯೆ ಸರೋಜಿನಿ ಸದಾಶಿವ ಆಚಾರ್ಯ, ಕುಟ್ರುಪ್ಪಾಡಿ ಗ್ರಾ.ಪಂ.ಸದಸ್ಯೆ ಜಾನಕಿ, ನಿವೃತ್ತ ಶಿಕ್ಷಕ ಸ್ಕರಿಯ ಕಳಾರ, ಪ್ರಮುಖರಾದ ಅಡ್ಕಾಡಿ ಪುತ್ತು, ದೇಜಪ್ಪ ಪೂಜಾರಿ ಪೆಲತ್ತೋಡಿ, ಅಶೋಕ್ಕುಮಾರ್ ಪಿ., ನಾರಾಯಣ ರೈ ಎಣ್ಮೆದಕಂಡ, ಉಮೇಶ್ ಪೆಲತ್ತೋಡಿ, ರಾಘವ ಕಳಾರ, ಸಿ.ವಿ.ಅಬ್ರಹಾಂ, ಕೃಷ್ಣಪ್ಪ ಮಡಿವಾಳ, ಎ.ಪಿ.ಗಿರೀಶ್, ಕೃಷ್ಣ ಅಲುಂಗೂರು, ಕಿಶನ್ಕುಮಾರ್ ರೈ ಮುಂತಾದವರು ಉಪಸ್ಥಿತರಿದ್ದರು. ಕಡಬ ಗ್ರಾ.ಪಂ.ಸದಸ್ಯ ಆದಂ ಕುಂಡೋಳಿ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಬಿಜೆಪಿ ಕುಟ್ರುಪ್ಪಾಡಿ ಬೂತ್ ಸಮಿತಿ ಅಧ್ಯಕ್ಷ ಲಕ್ಷ್ಮೀಶ ಬಂಗೇರ ಪೆಲತ್ತೋಡಿ ಅವರು ವಂದಿಸಿದರು.