ಫೆ 6ರಂದು ಪ್ರಧಾನಿ ಮೋದಿ ಕರ್ನಾಟಕಕ್ಕೆ ! ➤ತಿಂಗಳ ಅಂತರದಲ್ಲಿ ಎರಡನೇ ಭೇಟಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.31. ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 6ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ರಾಜ್ಯ ಬಿಜೆಪಿಯಲ್ಲಿ ಸಿದ್ದತೆಗಳು ಶುರುವಾಗಿದೆ. ಒಂದು ತಿಂಗಳ ಅವಧಿಯಲ್ಲಿ ಇದು ರಾಜ್ಯಕ್ಕೆ ಪ್ರಧಾನಿ ಮೋದಿಯವರ ಎರಡನೇ ಭೇಟಿಯಾಗಿದೆ.

ದಿನವಿಡೀ ಪ್ರಧಾನಿ ರಾಜ್ಯದಲ್ಲೇ ಇರಲಿದ್ದಾರೆ. ಬಿಐಇಸಿಯಲ್ಲಿ ಫೆಬ್ರವರಿ 6ರಿಂದ 8ರವರೆಗೆ ನಡೆಯುವ ಇಂಡಿಯಾ ಎನರ್ಜಿ ವೀಕ್‌ ಕಾರ್ಯಕ್ರಮಕ್ಕೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಬಳಿಕ ಗುಬ್ಬಿ ತಾಲೂಕಿನ ಬಿದರಹಳ್ಳಿ ಕಾವಲ್‌ನಲ್ಲಿ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ., (ಎಚ್‌ಎಎಲ್‌) ಹೆಲಿಕಾಪ್ಟರ್‌ ತಯಾರಿಕಾ ಕಾರ್ಖಾನೆ ಲೋಕಾರ್ಪಣೆ ಮಾಡಲಿದ್ದಾರೆ. ತಿಪಟೂರಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ್‌ ಮಿಷನ್‌ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

Also Read  ಇಸ್ಕಾನ್ ದೇಗುಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ  ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

error: Content is protected !!
Scroll to Top