ಮಂಗಳೂರು: ಹೆಲ್ಮೆಟ್ ಜೀವ ಉಳಿಸಿತು; ಆರೋಗ್ಯವಾಗಿದ್ದೇನೆ  ➤ ಅರವಿಂದ ಬೋಳಾರ್

(ನ್ಯೂಸ್ ಕಡಬ)newskadaba.com ಮಂಗಳೂರು, ಜ.31. ತಮ್ಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿದ್ದ ಅರವಿಂದ ಬೋಳಾರ್ ಅವರ ಅರೋಗ್ಯ ಚೆನ್ನಾಗಿದೆ. ಹೆಲ್ಮೆಟ್ ಧರಿಸಿದ್ದರಿಂದ ಅಪಾಯವಾಗಲಿಲ್ಲ ಎಂದು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಪಂಪ್ ವೆಲ್ ಸಮೀಪ ದ್ವಿಚಕ್ರ ವಾಹನ ಸ್ಕಿಡ್ ಆಗಿರುವ ಪರಿಣಾಮದಿಂದಾಗಿ ರಸ್ತೆಗೆ ಬಿದ್ದ ಬೋಳಾರ್ ಅವರಿಗೆ ಅಲ್ಪ ಗಾಯಗಳಾಗಿತ್ತು. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಪ್ರತಿಕ್ರಿಯೆ ನೀಡಿದ್ದಾರೆ. ದ್ವಿಚಕ್ರ ವಾಹನ ಸ್ಕಿಡ್ ಆಗಿ ಅಪಘಾತವಾಗಿದೆ. ಆದರೆ, ನನಗೆ ಏನೂ ಆಗಿಲ್ಲ. ನಾನು ಆರೋಗ್ಯವಾಗಿದ್ದೇನೆ. ಹೆಲ್ಮೆಟ್ ಧರಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಅಪಾಯದಿಂದ ಪಾರಾಗಿದ್ದೇನೆ. ಇಲ್ಲದಿದ್ದಲ್ಲಿ ಸ್ವಲ್ಪ ಕಷ್ಟವಿತ್ತು. ಆದರೆ, ಸದ್ಯ ನಿಮ್ಮ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ ಎಂದರು.

Also Read  ಕಡಬದಲ್ಲಿ ಪೂರ್ಣ ಪ್ರಮಾಣದ ಎಪಿಎಮ್‌ಸಿ ಸ್ಥಾಪನೆ

 

 

error: Content is protected !!
Scroll to Top