(ನ್ಯೂಸ್ ಕಡಬ) newskadaba.com, ಗುಂಟೂರು.ಜ.31: ಪಲ್ನಾಡು ಜಿಲ್ಲೆಯ ರಾಮಕೃಷ್ಣಾಪುರದ ಗುರುಕುಲ ಶಾಲೆಯಲ್ಲಿ ಸೋಮವಾರ ಆಹಾರ ಸೇವಿಸಿ 130 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಈ ಪೈಕಿ 60 ವಿದ್ಯಾರ್ಥಿಗಳು ವಾಂತಿ ಮತ್ತು ಭೇದಿಯಿಂದ ಬಳಲುತ್ತಿದ್ದು, ವಿಷಾಹಾರ ಸೇವನೆ ಎಂದು ಶಂಕಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುಕುಲದಲ್ಲಿ 650 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಮೂಲಗಳ ಪ್ರಕಾರ, ಸೋಮವಾರ ಬೆಳಿಗ್ಗೆ ಕೆಲವು ವಿದ್ಯಾರ್ಥಿಗಳು ಹೊಟ್ಟೆ ನೋವು ಮತ್ತು ವಾಕರಿಕೆ ಬಗ್ಗೆ ದೂರು ನೀಡಿದ್ದಾರೆ. ಶಾಲೆಯ ಆರೋಗ್ಯಾಧಿಕಾರಿಗಳು ಅಗತ್ಯ ಔಷಧಗಳನ್ನು ನೀಡಿದ್ದಾರೆ. ಆದಾಗ್ಯೂ, ಹಲವಾರು ಇತರ ವಿದ್ಯಾರ್ಥಿಗಳು ಸಹ ಇದೇ ರೋಗಲಕ್ಷಣಗಳೊಂದಿಗೆ ಅನಾರೋಗ್ಯಕ್ಕೆ ಒಳಗಾದಾಗ ಪರಿಸ್ಥಿತಿ ಹದಗೆಟ್ಟಿದೆ. ಬಳಿಕ ವಿದ್ಯಾರ್ಥಿಗಳನ್ನು ಸತ್ತೇನಪಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ. ಜಂಟಿ ಕಲೆಕ್ಟರ್ ಶ್ಯಾಮ್ ಪ್ರಸಾದ್ ಆಸ್ಪತ್ರೆಗೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು.