(ನ್ಯೂಸ್ ಕಡಬ) newskadaba.com, ಮುಂಬೈ.ಜ.31. ವಿಮಾನದಲ್ಲಿ ಎಕನಾಮಿ ಕ್ಲಾಸ್ ಟಿಕೆಟ್ ತೆಗೆದುಕೊಂಡು ಬ್ಯುಸಿನೆಸ್ ಕ್ಲಾಸ್ ಸೀಟು ಬೇಕೆಂದು ಪಟ್ಟುಹಿಡಿದು ವಿದೇಶೀ ಮಹಿಳೆಯೊಬ್ಬಳು ಅರೆನಗ್ನಳಾಗಿ ಅಶ್ಲೀಲ ವರ್ತನೆ ತೋರಿದ ಘಟನೆ ಏರ್ ವಿಸ್ತಾರ ವಿಮಾನವೊಂದರಲ್ಲಿ ನಿನ್ನೆ ಸೋಮವಾರ ನಡೆದಿದೆ. ಏರ್ ವಿಸ್ತಾರದ ಯುಕೆ 256 ವಿಮಾನ ಅಬುಧಾಬಿಯಿಂದ ಮುಂಬೈಗೆ ಬರುತ್ತಿದ್ದಾಗ ಈ ಘಟನೆ ವರದಿಯಾಗಿದೆ.
ವಿಮಾನದಲ್ಲಿ ಪಾವೊಲಾ ಅವರು ಎಕನಾಮಿ ಕ್ಲಾಸ್ ಟಿಕೆಟ್ (ಸಾಮಾನ್ಯ ದರ್ಜೆ) ಪಡೆದಿದ್ದರು. ತನಗೆ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಆಗಿ ಪರಿವರ್ತಿಸಿಕೊಡಬೇಕೆಂದು ಆಕೆ ವಿಮಾನದೊಳಗೆ ಪಟ್ಟು ಹಿಡಿದಿದ್ದರು. ಇದಕ್ಕೆ ಸಿಬ್ಬಂದಿ ಒಪ್ಪದಿದ್ದಾಗ ಈ ಮಹಿಳೆ ಕೋಪೋದ್ರಿಕ್ತಗೊಂಡು ಹಲ್ಲೆ ಮಾಡಿ ಉಗುಳಿದ್ದಾರೆ. ನಂತರ ತನ್ನ ಕೆಲ ವಸ್ತ್ರಗಳನ್ನು ಕಳಚಿ ರಂಪಾಟ ಮಾಡಿದ್ದಾರೆ. ಅರೆನಗ್ನಳಾಗಿಯೇ ವಿಮಾನದೊಳಗೆ ಅಡ್ಡಾಡಿದ್ದಾರೆ. ಸಿಬ್ಬಂದಿ ಪ್ರಕಾರ ಈಕೆ ಕುಡಿದ ಮತ್ತಿನಲ್ಲಿದ್ದರೆನ್ನಲಾಗಿದೆ. ಈ ಘಟನೆ ಬಳಿಕ ಪೊಲೀಸರು ಈಕೆಯನ್ನು ಬಂಧಿಸಿದರಾದರೂ ಕೋರ್ಟ್ನಲ್ಲಿ ಜಾಮೀನು ಸಿಕ್ಕಿದೆ.