(ನ್ಯೂಸ್ ಕಡಬ) newskadaba.com, ಬೆಂಗಳೂರು. ಜ.31. ಕೆಲಸಕ್ಕೆಂದು ಹೊರಟಿದ್ದ ಬಿಎಂಟಿಸಿ ಚಾಲಕ ಲಾಡ್ಜ್‌ವೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕೆಂಗೇರಿಯಲ್ಲಿ ನಡೆದಿದೆ. ಕೆಂಗೇರಿಯ ಲಾಡ್ಜ್‌ವೊಂದರಲ್ಲಿ ಯುವಕನ ಮೃತದೇಹ ಪತ್ತೆಯಾಗಿದ್ದು, ಮೃತ ಬಿಎಂಟಿಸಿ ಚಾಲಕನನ್ನು ಚನ್ನಪಟ್ಟಣ ಮೂಲದ ಪುಟ್ಟೇಗೌಡ (28) ಎಂದು ಗುರುತಿಸಲಾಗಿದೆ.
ಕಳೆದ ಆರು ತಿಂಗಳಿನಿಂದ ಬಿಬಿಎಂಟಿಸಿ ಡ್ರೈವರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುಟ್ಟೇಗೌಡ ಅವರು ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕೆಲಸಕ್ಕೆ ಹೋಗುತ್ತೀನಿ ಎಂದು ಮನೆಯ ಸದಸ್ಯರ ಬಳಿ ಹೇಳಿ ಹೊರಟಿದ್ದರು. ಅದರೆ ಸಂಜೆ ವೇಳೆಗೆ ಕೇಂಗೇರಿಯ ಲಾಡ್ಜ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತ ಪುಟ್ಟೇಗೌಡನ ಹಣೆ ಮೇಲೆ ಗಾಯವಾಗಿದೆ ಎಂದು ಸಂಬಂಧಿಕರು ಆರೋಪ ಮಾಡಿದ್ದು, ಹೀಗಾಗಿ ಈ ಸಾವಿನ ಹಿಂದೆ ಪುಟ್ಟೇಗೌಡನ ಮನೆಯವರು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.