ಹೆಂಡತಿ ಕಣ್ಣೆದುರಲ್ಲೇ ಹಾವು ಕಚ್ಚಿ ಮೃತಪಟ್ಟ ಗಂಡ

(ನ್ಯೂಸ್ ಕಡಬ)newskadaba.com ಆಸ್ಟ್ರೇಲಿಯಾ, ಜ.30. 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಅವರ ಪತ್ನಿಯ ಕಣ್ಣೆದುರಲ್ಲೇ ಹಾವು ಕಚ್ಚಿದ್ದು, ವೈದ್ಯಕೀಯ ಸಿಬ್ಬಂದಿ ಆಗಮಿಸುವ ಮುನ್ನವೇ ಅವರು ಸಾವನ್ನಪ್ಪಿದ್ದಾರೆ. ಆಸ್ಟ್ರೇಲಿಯಾದ ನ್ಯೂ ಝೀಲ್ಯಾಂಡ್ ಹೆರಾಲ್ಡ್‌ನಲ್ಲಿ ಕುರಿತು ವರದಿ ಪ್ರಕಟವಾಗಿದೆ.

ಇಲ್ಲಿನ ಕ್ವೀನ್ಸ್‌ಲ್ಯಾಂಡ್‌ನ ತಮ್ಮ ಖಾಸಗಿ ನಿವೇಶನದಲ್ಲಿ ಸಂಚರಿಸುತ್ತಿದ್ದ ವೇಳೆ ವ್ಯಕ್ತಿಯ ಕೈಗೆ ಹಾವು ಕಚ್ಚಿತು. ಕೂಡಲೇ ಇವರ ಪತ್ನಿ ಆರೋಗ್ಯ ನೆರವಿಗಾಗಿ ತುರ್ತು ಕರೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆರೋಗ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸುವ ಹೊತ್ತಿಗೆ ವೃದ್ಧ ವ್ಯಕ್ತಿ ಸಾವನ್ನಪ್ಪಿದ್ದರು.

Also Read  ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸಲು ಅವಕಾಶ ಇಲ್ಲ.!

 

error: Content is protected !!
Scroll to Top