➤ ಮಗಳ ಕನಸನ್ನು ನನಸು ಮಾಡಲು ಆಟೋ ಚಾಲಕಿಯಾದ ತಾಯಿ

(ನ್ಯೂಸ್ ಕಡಬ) newskadaba.com,ಬೆಂಗಳೂರು. ಜ.30. ಹೆಣ್ಣು ಮಗು ಎಂದು ಬಿಟ್ಟು ಹೋದ ಗಂಡ, ಮಗಳ ಕನಸನ್ನು ನನಸು ಮಾಡಲು ಆಟೋ ಚಾಲಕಿಯಾದ ತಾಯಿಯೊಬ್ಬಳ ಕತೆ ಇದು. ಈ ತಾಯಿಯ ಹೆಸರು ಗಾಯತ್ರಿ. ಕೇವಲ 35 ವರ್ಷ. ಗಾಯತ್ರಿಗೆ ತನ್ನ ಸಣ್ಣ ವಯಸ್ಸಿನಲ್ಲಿಯೇ ಮದುವೆ ಮಾಡುತ್ತಾರೆ.

ಇವರಿಗೆ ಹೆಣ್ಣು ಮಗು ಜನಿಸುತ್ತದೆ. ಆದರೆ ಗಂಡ ಹೆಣ್ಣು ಮಗು ಅಂತ ಪತ್ನಿ ಹಾಗೂ ಮಗುವನ್ನು ಬಿಟ್ಟು ಹೋಗುತ್ತಾರೆ.  ಆದರೆ ಯಾವುದೇ ವಿಷಯಕ್ಕೂ ಕೊರಗದೇ ಎಲ್ಲವನ್ನು ದೈರ್ಯದಿಂದ ನಿಭಾಯಿಸಲು ಮುಂದಾಗುತ್ತಾರೆ ಈ ತಾಯಿ.  ಉತ್ತರ ಪ್ರದೇಶದ ಅಯೋಧ್ಯೆಯ ಜೈನ್​ಪುರದಲ್ಲಿ ಈಕೆ ವಾಸಿಸುತ್ತಾ ಇದ್ದು,  ಇದರ ಜೊತೆಗೆ ಇವರ ವೃತ್ತಿ ಆಟೋ ರಿಕ್ಷಾ ಓಡಿಸುವುದು.

Also Read  ಕಡಬ: ಎಸ್ಸೆಸ್ಸೆಫ್ ಸೆಕ್ಟರ್ ಗೆ ನೂತನ ಸಾರಥಿಗಳ ಆಯ್ಕೆ ➤ ಅಧ್ಯಕ್ಷರಾಗಿ ಝಿಯಾರ್ ಕೋಡಿಂಬಾಳ ಆಯ್ಕೆ

ಮಹಿಳೆಯು ಆಟೋ ಓಡಿಸ್ತಾ ಇರೋದಾ ಅದೂ 35 ವರ್ಷಕ್ಕೆ ಅಂತ ಆಶ್ಚರ್ಯ ಆಗ್ತಾ ಇದ್ದೀರಾ? ಇದು ಇವರ ಆಯ್ಕೆ ಅಲ್ಲ. ಬದುಕನ್ನು ಸಾಗಿಸಲು ಈ ದಾರಿಯನ್ನು ಹಿಡಿದಿದ್ದಾರೆ. ತನ್ನ ಮಗಳಾದ ಶ್ರೇಯಾಳನ್ನು ಡಾಕ್ಟರ್​ ಮಾಡಬೇಕೆಂಬುದು ಇವರ ಮಹದ್ದಾಸೆ ಆಗಿದೆ.

error: Content is protected !!
Scroll to Top