ಬೆಳ್ತಂಗಡಿ: ಅಪರಿಚಿತ ವ್ಯಕ್ತಿಯ ಬ್ಲ್ಯಾಕ್ ಮೇಲ್ ಗೆ ಬಿ.ಕಾಂ ವಿದ್ಯಾರ್ಥಿ ಆತ್ಮಹತ್ಯೆ !

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಜ.30. ಅಪರಿಚಿತ ವ್ಯಕ್ತಿಯ ಬ್ಲ್ಯಾಕ್ ಮೇಲ್ ಗೆ ಹೆದರಿ ಬಿ.ಕಾಂ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಧರ್ಮಸ್ಥಳ ಗ್ರಾಮದ ಅಶೋಕ್ ನಗರ ನಿವಾಸಿ, ಬೆಳ್ತಂಗಡಿ ಖಾಸಗಿ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಹರ್ಷಿತ್ (19) ಎಂದು ಗುರುತಿಸಲಾಗಿದೆ.

ಹರ್ಷಿತ್ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಸುಮಾರು 15 ದಿನಗಳ ಹಿಂದೆ ಓರ್ವ ಅಪರಿಚಿತ ವ್ಯಕ್ತಿಯು ಸಂಪರ್ಕಕ್ಕೆ ಬಂದಿದ್ದು, ಆ ಬಳಿಕ ಹರ್ಷಿತ್ ಆತನೊಂದಿಗೆ ಇನ್‌ ಸ್ಟಾಗ್ರಾಂ ಮೂಲಕ ಚಾಟ್ ಮಾಡಿಕೊಂಡಿದ್ದ. ಆ ಬಳಿಕ ಅಪರಿಚಿತ ವ್ಯಕ್ತಿಯು ಮೊಬೈಲ್‌ ಗೆ ವಿಡಿಯೋ ಕಾಲ್‌ ಮಾಡಿ ಮಾತಾಡಿ, ಹರ್ಷಿತ್ ಬಳಿ ನಿಮ್ಮ ವೈಯಕ್ತಿಕ ವಿಡಿಯೋ ನನ್ನ ಬಳಿ ಇದ್ದು, ಇದನ್ನು ಸಾರ್ವಜನಿಕವಾಗಿ ವೈರಲ್‌ ಮಾಡುತ್ತೇನೆ‌, ವೈರಲ್‌ ಮಾಡಬಾರದು ಎಂದಾದರೆ ತನಗೆ 11,000 ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದನು.

Also Read  ಮಂಗಳೂರು: ವಿಮಾನ ದುರಂತಕ್ಕೆ ಸಂದಿತು 9 ವರುಷ ➤ ಜಗತ್ತನ್ನೇ ಬೆಚ್ಚಿ ಬೀಳಿಸಿದ ಕರಾವಳಿಯ ಭೀಕರ ದುರಂತ

error: Content is protected !!