ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಾಟ ➤ ಇಬ್ಬರ ಬಂಧನ

(ನ್ಯೂಸ್ ಕಡಬ)newskadaba.com ಕಾಸರಗೋಡು, ಜ.30. ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಎಂಡಿಎಂಎ ಮಾದಕ ವಸ್ತು ಸಹಿತ ಇಬ್ಬರನ್ನು ಅಬಕಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಕುಂಬಳೆ ಬಂಬ್ರಾಣದ ಅಬ್ದುಲ್ ರುಮೈಸ್ (27) ಮತ್ತು ಉಪ್ಪಳ ಪೆರಿಂಗಡಿಯ ಎಂ.ಕೆ ಮುಸ್ತಾಫಾ (39) ಬಂಧಿತರು ಎಂದು ತಿಳಿದುಬಂದಿದೆ.

ಇವರಿಂದ 69 ಗ್ರಾಂ. ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದ್ದು, ಉಪ್ಪಳ ಪೇಟೆಯಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆ. ಇನ್ನು ಬಂಧಿತ ರುಮೈಸ್ ಐದು ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದವೊಂದರ ಆರೋಪಿ ಎಂದು ತಿಳಿಸಿದ್ದಾರೆ.

Also Read  ಆರ್ ಜಿ ಕರ್ ಆಸ್ಪತ್ರೆಯ 50 ವೈದ್ಯರ ಸಾಮೂಹಿಕ ರಾಜೀನಾಮೆ

error: Content is protected !!
Scroll to Top