ಮೈಮೇಲೆ ಕಬ್ಬಿಣದ ಗೇಟ್ ಬಿದ್ದು ಬಾಲಕಿ ಮೃತ್ಯು !

(ನ್ಯೂಸ್ ಕಡಬ)newskadaba.com ಚೆನ್ನೈ, ಜ.30. ಕಬ್ಬಿಣದ ಗೇಟ್‌ ಬಿದ್ದು, 5 ವರ್ಷದ ಬಾಲಕಿ ಮೃತಪಟ್ಟ ಘಟನೆ ಚೆನ್ನೈನಲ್ಲಿ ವದರಿಯಾಗಿದೆ. ಶಂಕರ್ ಮತ್ತು ವಾಣಿ ದಂಪತಿಯ ಪುತ್ರಿ ಹರಿಣಿ (5) ಮೃತ ಬಾಲಕಿ.

ಚೆನ್ನೈನ ಕಿಲ್ಲಿಪಾಕ್ಕಂನ ಹರ್ಲಿಕ್ಸ್ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯಲ್ಲಿ ಶಂಕರ್ ಕೆಲಸ ಮಾಡುತ್ತಿದ್ದು, ಶಂಕರನ ಹೆಂಡತಿ ವಾಣಿ ಮತ್ತು ಅವನ ಮಗಳು ಹರಿಣಿ ಅವನನ್ನು ನೋಡಲು ಬಟ್ಟೆ ಅಂಗಡಿಗೆ ಬಂದಿದ್ದಾರೆ‌. ಆವರಣದಲ್ಲಿದ್ದ 20 ಅಡಿ ಅಗಲದ ಸ್ಲೈಡಿಂಗ್ ಕಬ್ಬಿಣದ ಗೇಟ್ ತೆರೆಯಲು ಯತ್ನಿಸುತ್ತಿದ್ದಾಗ ಗೇಟ್ ಬಾಲಕಿ ಶ್ರೀಹರಿಣಿ ಮೇಲೆ ಬಿದ್ದಿದೆ.

Also Read  ಪಾಲಿಟೆಕ್ನಿಕ್ - ಡಿಪ್ಲೊಮಾ ಕೋರ್ಸುಗಳಿಗೆ ಅರ್ಜಿ ಆಹ್ವಾನ

ಇದರಿಂದಾಗಿ ಬಾಲಕಿಯ ತಲೆಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ಬಾಲಕಿಯನ್ನು ಚೆನ್ನೈನ ಕಿಲ್ಪಾಕ್ಕಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾಲಕಿ ದಾರುಣವಾಗಿ ಸಾವನ್ನಪ್ಪಿದ್ದಾಳೆ.

 

error: Content is protected !!
Scroll to Top