ದ್ವಿಚಕ್ರ ವಾಹನ ಸವಾರರು ಅರ್ಧ ಹೆಲ್ಮೆಟ್ ಧರಿಸಿದರೆ ಬೀಳುತ್ತೆ ದಂಡ !

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.30. ಬೆಂಗಳೂರಿನಲ್ಲಿ ಟೋಪಿ ಮಾದರಿಯ ಅರ್ಧ ಹೆಲ್ಮೆಟ್ ಅಥವಾ ISI ಮುದ್ರೆ ಇಲ್ಲದ ಹೆಲ್ಮೆಟ್ ಧರಿಸಿದರೆ ದಂಡ ವಿಧಿಸಲಾಗುತ್ತಿದೆ. ಸಂಚಾರ ಪೊಲೀಸರು ಅರ್ಧ ಹೆಲ್ಮೆಟ್ ನ್ನು ಹೆಲ್ಮೆಟ್ ರಹಿತ ಚಾಲನೆ ಎಂದೇ ಪರಿಗಣಿಸಿ ದಂಡ ವಿಧಿಸುತ್ತಿದ್ದಾರೆ.

ಮೋಟಾರು ವಾಹನ ನಿಯಮಗಳ 1989 ನಿಯಮ 230(1) ಕ್ಕೆ ತಿದ್ದುಪಡಿ ಬೆನ್ನಲ್ಲೇ ರಾಜ್ಯವ್ಯಾಪಿ ಬೈಕ್ ಸವಾರ ಮತ್ತು ಹಿಂಬದಿ ಸವಾರರು ಐಎಸ್ ಐ ಮುದ್ರೆಯ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಟೋಪಿ ಮಾದರಿಯ ಹೆಲ್ಮೆಟ್ ಗೆ ಹೆಲ್ಮೆಟ್ ರಹಿತ ಚಾಲನೆ ಎಂದು ಪರಿಗಣಿಸಿ 500 ರೂ. ದಂಡ ವಿಧಿಸಲಾಗುತ್ತಿದೆ.

Also Read  ದಸರಾ: ಮೈಸೂರು-ಮಂಗಳೂರು ವಾಹನ ಸಂಚಾರದಲ್ಲಿ ಬದಲಾವಣೆ

error: Content is protected !!
Scroll to Top