ಪುತ್ತೂರು: ಕಂಬಳದಲ್ಲಿ ಚಿತ್ರ ನಟಿ ಸಾನಿಯಾ ಅಯ್ಯರ್ ಗೆ ಮುಜುಗರ…!

(ನ್ಯೂಸ್ ಕಡಬ)newskadaba.com ಪುತ್ತೂರು, ಜ.30. ನಗರದಲ್ಲಿ ನಡೆಯುತ್ತಿರುವ ಕೋಟಿ-ಚೆನ್ನಯ ಕಂಬಳದಲ್ಲಿ ಚಿತ್ರ ನಟಿ ಸಾನಿಯಾ ಅಯ್ಯರ್ ಗೆ ಅಭಿಮಾನಿಯೊಬ್ಬ ಕಿರಿಕ್ ಮಾಡಿರುವ ಘಟನೆ ವರದಿಯಾಗಿದೆ.


ಚಿತ್ರನಟಿ ಸಾನಿಯಾ ಅಯ್ಯರ್ ಪುತ್ತೂರು ಕೋಟಿ-ಚೆನ್ನಯ ಕಂಬಳಕ್ಕೆ ಅತಿಥಿಯಾಗಿ ಆಗಮಿಸಿದ್ದು, ವೇದಿಕೆಯಿಂದ ಇಳಿದು ಬರುವ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಸೆಲ್ಫಿ ಕೆಳುವ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಹಿಡಿದು ಎಳೆದಿರುವ ಆರೋಪ ಎದುರಾಗಿದೆ, ಇದರಿಂದ ಸಾನಿಯ ಅಯ್ಯರ್ ಮುಜುಗರಕ್ಕೊಳಗಾಗಿದ್ದಾರೆ.


ಅಭಿಮಾನಿ ಸಾನಿಯಾ ಅಯ್ಯರ್ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಐ ಲವ್ ಯೂ ಹೇಳುತ್ತಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷೀಕೇಶ್ ಸೊನವಣೆ ತಿಳಿಸಿದ್ದಾರೆ.

Also Read  ಕೊರೋನಾ ನಿಯಮಗಳಿಂದ ಸ್ಥಗಿತವಾಗಿದ್ದ ಕಂಬಳ ಕೂಟದ ಪರಿಷ್ಕೃತ ವೇಳಾಪಟ್ಟಿ ಪ್ರಕಟ

 

error: Content is protected !!
Scroll to Top