➤ಗುಜರಾತ್ ನ ಕಚ್ ನಲ್ಲಿ ಭೂಕಂಪನ

(ನ್ಯೂಸ್ ಕಡಬ) newskadaba.com, ಗುಜರಾತ್, .30. ಗುಜರಾತ್​ನ ಕಚ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನ ಸಂಶೋಧನಾ ಸಂಸ್ಥೆ ಈ  ಬಗ್ಗೆ ಮಾಹಿತಿಯನ್ನು ನೀಡಿದೆ.

 

ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾಗಿಲ್ಲ.  ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಇಂದು ಬೆಳಿಗ್ಗೆ 6.38 ಕ್ಕೆ 4.2 ತೀವ್ರತೆಯ ಭೂಕಂಪ ಸಂಭವಿಸಿತು. ಮತ್ತು ಅದರ ಕೇಂದ್ರಬಿಂದು ಕಚ್‌ನ ದುಧೈ ಗ್ರಾಮದ ಉತ್ತರ-ಈಶಾನ್ಯಕ್ಕೆ 11 ಕಿ.ಮೀ ಇತ್ತು ಎಂದು ಹೇಳಲಾಗಿದೆ.

error: Content is protected !!
Scroll to Top