ಮಂಗಳೂರು: ನಾಪತ್ತೆಯಾಗಿದ್ದ ಯುವತಿ ವಿವಾಹವಾಗಿ ಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.30. ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಯುವತಿ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿ ಪತ್ತೆಯಾಗಿದ್ದಾಳೆ. ನಾಪತ್ತೆಯಾಗಿದ್ದ ಕಮಲಾಕ್ಷ ಎಂಬವರ ಪುತ್ರಿ, ನಗರದ ಫೈನಾನ್ಸ್‌ ಕಂಪನಿಯೊಂದರ ಉದ್ಯೋಗಿ ಶಿವಾನಿ (20)ತನ್ನ ಪ್ರಿಯಕರನೊಂದಿಗೆ ಮದುವೆಯಾಗಿದ್ದು, ಪೊಲೀಸರು ತಂತ್ರಜ್ಞಾನ ಮಾಹಿತಿ ಆಧಾರದಲ್ಲಿ ಪತ್ತೆ ಮಾಡಿ ಕರೆ ತಂದಿದ್ದಾರೆ.

ಕಂಕನಾಡಿ ಠಾಣೆಯ ಪೊಲೀಸ್‌ ಆಧಿಕಾರಿಗಳ ಮುಂದೆ ಹಾಜರಾಗಿ ತಾನು ಪ್ರೀತಿಸಿದವನನ್ನು ಸ್ವಯೇಚ್ಚೆಯಿಂದ ಮದುವೆಯಾಗಿದ್ದಾಗಿ ಹೇಳಿಕೆ ನೀಡಿದ್ದು ಪತಿಯೊಂದಿಗೆ ಬಾಳುವುದಾಗಿ ಲಿಖಿತ ಹೇಳಿಕೆ ನೀಡಿದ್ದಾಳೆ.

ಲವ್‌ ಜಿಹಾದ್‌ ಆತಂಕದ ನಡುವೆ ಒಂದು ವಾರ ಪೊಲೀಸರು ಪತ್ತೆಗೆ ಪ್ರಯತ್ನಿಸಿದ್ದರು. ಗೋವಾ, ಮುಂಬೈಗೆ ತೆರಳಿದ್ದ ಜೋಡಿ ಹಣದ ಸಮಸ್ಯೆ ಎದುರಾದಾಗ ಎರಡು ಮೊಬೈಲ್‌ ಮಾರಿ ಅದರ ಹಣದಿಂದ ಸ್ವಲ್ಪ ಸಮಯ ಕಳೆದಿದ್ದರು. ಸ್ನೇಹಿತರ ಜತೆ ಸಂಪರ್ಕ ಹೊಂದಿದ್ದನ್ನು ಪತ್ತೆ ಹಚ್ಚಿದ ಪೊಲೀಸರು ಯುಪಿಐ ಹಣವನ್ನು ಹಾಕಿದ ವಿಳಾಸ ಪತ್ತೆ ಮಾಡಿ ಈ ಜೋಡಿಯ ಸಂಪರ್ಕ ಸಾಧಿಸಿದ್ದರು.

Also Read  ಹಾಶಿಂ ಬನ್ನೂರು ಅವರ ಅಂಕಣ ಬರಹ ಎಚ್ಚರಿಕೆಯ ಗಂಟೆ ಬಾರಿಸುತಿವೆ ಪ್ರಕೃತಿಯ ದುರಂತಗಳು..!.

 

 

error: Content is protected !!
Scroll to Top