ದೆಹಲಿಯಲ್ಲಿ ಕೃಷಿ ವಿಜ್ಞಾನಿಯಾದ ಕನ್ನಡದ ಹಳ್ಳಿ ಹುಡುಗ                              

(ನ್ಯೂಸ್ ಕಡಬ)newskadaba.com ಕೋಲಾರ, ಜ.28. ಏನಾದರೂ ಸಾಧಿಸಲೇಬೇಕು ಎಂಬ ಹಠವಿದ್ದರೆ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತೆ. ಆದ್ರೆ ಕಠಿಣ ಸವಾಲುಗಳಷ್ಟೇ ಅಲ್ಲ ಮನೆಯ ಆರ್ಥಿಕ ಪರಿಸ್ಥಿತಿ ಕಷ್ಟದಲ್ಲಿದ್ದರೂ ಸಹ ಆ ಕಷ್ಟಗಳನ್ನೇ ಮೆಟ್ಟಿಲಾಗಿಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಈ ಯುವ ಕೃಷಿ ವಿಜ್ಞಾನಿ.


ಕೋಲಾರ ತಾಲೂಕಿನ ಸುಗಟೂರು ಹೋಬಳಿಯ ಬೈಪನಹಳ್ಳಿ ಗ್ರಾಮದ ಪ್ರತಾಪ್ ವಿ. ಅವರು ನವದೆಹಲಿಯ ಭಾರತೀಯ ಕೃಷಿ ವಿಜ್ಞಾನ ನೇಮಕಾತಿ ಮಂಡಳಿಯು ನಡೆಸಿದ ಕೃಷಿ ಸಂಶೋಧನಾ ಸೇವೆ (ಎಆರ್ ಎಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಕೃಷಿ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ರಾಷ್ಟ್ರಮಟ್ಟದ ಈ ಹುದ್ದೆಗಾಗಿ ಸಾವಿರಾರು ಮಂದಿ ಪರೀಕ್ಷೆ ಬರೆದಿದ್ದರು ಎಂದು ತಿಳಿದುಬಂದಿದೆ.

Also Read  ಡಿ.11 ರಂದು ಶ್ವಾನ ಪ್ರದರ್ಶನ

error: Content is protected !!
Scroll to Top