ಐಎಎಫ್ 2 ಯುದ್ಧ ವಿಮಾನಗಳ ಅಪಘಾತ ➤ ಓರ್ವ ಪೈಲಟ್ ಮೃತ್ಯು

(ನ್ಯೂಸ್ ಕಡಬ)newskadaba.com ಭೋಪಾಲ್, ಜ.28. ಮಧ್ಯಪ್ರದೇಶದ ಮೊರೆನಾದಲ್ಲಿ ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳು ಅಪಘಾತಕ್ಕೀಡಾಗಿವೆ. ಈ ಭೀಕರ ದುರಂತದಲ್ಲಿ ವಿಮಾನಗಳು ಪುಡಿಪುಡಿಯಾಗಿವೆ. ಆದರೆ ಸುಖೋಯ್ ವಿಮಾನದಲ್ಲಿದ್ದ ಇಬ್ಬರೂ ಪೈಲಟ್‌ಗಳು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡಿರುವ ಇಬ್ಬರನ್ನೂ ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದು ಫೈಟರ್ ಜೆಟ್‌ನ ಪೈಲಟ್‌ಗೆ ಮೃತಪಟ್ಟಿದ್ದಾರೆ.


“ಸುಖೋಯ್- 30 ಮತ್ತು ಮಿರಾಜ್ 2000 ಯುದ್ಧ ವಿಮಾನಗಳು ಮಧ್ಯಪ್ರದೇಶದ ಮೊರೆನಾ ಸಮೀಪ ಪತನಗೊಂಡಿವೆ. ಪತ್ತೆ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಆರಂಭಿಸಲಾಗಿದೆ” ಎಂದು ರಕ್ಷಣಾ ಮೂಲಗಳು ಹೇಳಿವೆ. ಇದು ಆಕಾಶದ ನಡುವೆ ಸಂಭವಿಸಿದ ಅಪಘಾತವೇ ಅಥವಾ ಅಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಐಎಎಫ್, ಸೇನಾ ತನಿಖೆಗೆ ಆದೇಶಿಸಿದೆ.

Also Read  ಈ 5 ವಸ್ತುಗಳು ಮನೆಯಲ್ಲಿ ಇದ್ದರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಆಗುತ್ತದೆ

 

error: Content is protected !!
Scroll to Top