ಮಾನವೀಯತೆ ಮರೆತ ಪಾಪಿಗಳು ➤ ನಾಯಿಯನ್ನು  ಗೋಣಿಚೀಲದಲ್ಲಿ ಹಾಕಿ ದೊಣ್ಣೆಯಿಂದ ಹೊಡೆದು ಕೊಲೆ!

(ನ್ಯೂಸ್ ಕಡಬ) newskadaba.com, ಉಡುಪಿ, .28. ಕಾಲೇಜು ವಿದ್ಯಾರ್ಥಿನಿ ನಾಯಿಯೊಂದಿಗೆ ಆಟವಾಡಿದಳು ಎಂಬ ಕಾರಣಕ್ಕೆ ನಾಯಿಯನ್ನು ಗೋಣಿಚೀಲದಲ್ಲಿ ಹಾಕಿ ಬರ್ಬರವಾಗಿ ಬಡಿದುಕೊಲೆ ಮಾಡಿರುವ ಅಮಾನವೀಯ ಘಟನೆ ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವದಲ್ಲಿ ನಡೆದಿದೆ.

ಬಂಟಕಲ್ ಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ  ಈ ಘಟನೆ ನಡೆದಿದ್ದು, ಕಾಲೇಜಿನ ವಾರ್ಡನ್​ ರಾಜೇಶ್ ವಿಕೃತ್  ಎಂಬಾತ ಈ ನೀಚ ಕೃತ್ಯ ಮೆರೆದಿದ್ದಾನೆ. ಕಾಲೇಜು ವಿದ್ಯಾರ್ಥಿನಿ ನಾಯಿ ಜೊತೆ ಆಟವಾಡಿದ್ದಕ್ಕೆ ನಾಯಿಯನ್ನೇ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಈ ಕೃತ್ಯದ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.

Also Read  ದ್ವಿತೀಯ ಪಿಯು ಪರೀಕ್ಷಾ ಅವಧಿಯ 15 ನಿಮಿಷ ಕಡಿತಗೊಳಿಸಿ ಸರಕಾರ ಆದೇಶ

 

error: Content is protected !!
Scroll to Top