ಖಾಸಗಿ ನರ್ಸಿಂಗ್ ಹೋಂನಲ್ಲಿ ಬೆಂಕಿ ಅವಘಡ    ➤ ಐವರು ಮೃತ್ಯು

(ನ್ಯೂಸ್ ಕಡಬ)newskadaba.com ಜಾರ್ಖಂಡ್‌, ಜ.28. ಖಾಸಗಿ ನರ್ಸಿಂಗ್ ಹೋಂವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ವೈದ್ಯ ದಂಪತಿ ಸೇರಿದಂತೆ ಕನಿಷ್ಠ ಐವರು ಮೃತಪಟ್ಟ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

ಸಂಸ್ಥೆಯ ಮಾಲಕ ಡಾ. ವಿಕಾಸ್ ಹಜ್ರಾ, ಅವರ ಪತ್ನಿ ಡಾ. ಪ್ರೇಮಾ ಹಜ್ರಾ, ಮಾಲಕರ ಸೋದರಳಿಯ ಸೋಹನ್ ಖಮಾರಿ ಮತ್ತು ಮನೆಯ ಸಹಾಯಕಿ ತಾರಾದೇವಿ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಮೃತಪಟ್ಟ ಇನ್ನೋರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಜಾರ್ಖಂಡ್‌ನ ಧನ್‌ಬಾದ್‌ನ ಬ್ಯಾಂಕ್ ಮೋರ್ ಪ್ರದೇಶದಲ್ಲಿರುವ ಖಾಸಗಿ ನರ್ಸಿಂಗ್ ಹೋಂನ ಸ್ಟೋರ್ ರೂಮ್‌ನಲ್ಲಿ ಘಟನೆ ಸಂಭವಿಸಿದೆ.

Also Read  ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ➤  7ನೇ ವೇತನ ಆಯೋಗ ವರದಿ ಶೀಘ್ರ ಸಲ್ಲಿಕೆಗೆ ಮನವಿ

error: Content is protected !!
Scroll to Top