ಜ. 30ರಿಂದ ಮಾಂಸ ಮಾರಾಟ ನಿಷೇಧ ➤ ಮಾಂಸಾಹಾರಿ ಹೋಟೆಲ್​ಗಳೂ ಕ್ಲೋಸ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.28. ಜ. 30ರಿಂದ ಬೆಂಗಳೂರಿನ ಪ್ರದೇಶವೊಂದರಲ್ಲಿ ಮಾಂಸ ಮಾರಾಟವನ್ನು ನಿಷೇಧಗೊಳಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಆದೇಶವನ್ನು ಉಲ್ಲಂಘಿಸಿದರೆ ಕಾನೂನುಕ್ರಮ ಜರುಗಿಸಲಾಗುವುದು ಎಂಬುದಾಗಿಯೂ ಅದು ಎಚ್ಚರಿಕೆ ನೀಡಿದೆ.

ಯಲಹಂಕ ವೈಮಾನಿಕ ನೆಲೆಯಲ್ಲಿ ಫೆ.13ರಿಂದ 17ರ ವರೆಗೆ ನಡೆಯಲಿರುವ ಏರೋ ಇಂಡಿಯಾ-2023 ಶೋ ಹಿನ್ನೆಲೆಯಲ್ಲಿ ಬಿಬಿಎಂಪಿ ಆದೇಶವನ್ನು ಹೊರಡಿಸಿದೆ. ಜ. 30ರಿಂದ ಫೆ. 20ರ ವರೆಗೂ ಈ ಆದೇಶ ಜಾರಿಯಲ್ಲಿ ಇರಲಿದೆ ಎಂದು ಬಿಬಿಎಂಪಿ ಹೇಳಿದೆ. ಯಲಹಂಕ ವಲಯದ ವ್ಯಾಪ್ತಿಯಲ್ಲಿ ಅಂದರೆ ವೈಮಾನಿಕ ನೆಲೆಯ ಸುತ್ತಲಿನ 10 ಕಿ.ಮೀ. ಪ್ರದೇಶಕ್ಕೆ ಅನ್ವಯಿಸುವಂತೆ ಈ ಆದೇಶ ಹೊರಡಿಸಲಾಗಿದೆ.

Also Read  ಮಳೆ ದುರಂತ ಸ್ಥಳಗಳಿಗೆ ರಾಜಕೀಯ ನಾಯಕರ ಭೇಟಿ ► ಪರಿಹಾರದೊಂದಿಗೆ, ಸರಕಾರಿ ಉದ್ಯೋಗದ ಭರವಸೆ

ಜ. 30ರಿಂದ ಫೆ. 20ರ ವರೆಗೆ ಯಾರೂ ಕುರಿ, ಕೋಳಿ, ಮೀನು ಸೇರಿದಂತೆ ಮಾಂಸ ಮಾರಾಟ ಮಾಡುವಂತಿಲ್ಲ. ಅಲ್ಲದೆ ಈ ವ್ಯಾಪ್ತಿಯಲ್ಲಿನ ಮಾಂಸದಂಗಡಿಗಳು ಮಾತ್ರವಲ್ಲದೆ, ಮಾಂಸಾಹಾರದ ಹೋಟೆಲ್​ಗಳೂ ಮುಚ್ಚಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಉಲ್ಲಂಘಿಸಿದರೆ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಏರ್‌ಕ್ರಾಪ್ಟ್ ರೂಲ್ಸ್ 1937ರ ರೂಲ್ 91 ಪ್ರಕಾರ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.

 

error: Content is protected !!
Scroll to Top