(ನ್ಯೂಸ್ ಕಡಬ)newskadaba.com ನವದೆಹಲಿ, ಜ.28. 2023 ರ ವರ್ಷದ ಮೊದಲ ತಿಂಗಳು ಕೊನೆಗೊಳ್ಳಲಿದೆ. ನಂತರ ಹೊಸ ತಿಂಗಳು ಹೊಸ ಬದಲಾವಣೆಗಳೊಂದಿಗೆ ಪ್ರಾರಂಭವಾಗುತ್ತದೆ. ಫೆಬ್ರವರಿ 1 ರಿಂದ ಅನೇಕ ನಿಯಮಗಳು ಬದಲಾಗಲಿವೆ. ಅವುಗಳ ಪರಿಣಾಮವು ಸಾಮಾನ್ಯ ಜನರ ಮೇಲೂ ಪರಿಣಾಮ ಬೀರಲಿವೆ ಎನ್ನಲಾಗಿದೆ.
ಸಂಚಾರ, ಪ್ಯಾಕೇಜಿಂಗ್, ಗೇಮಿಂಗ್, ಆದಾಯ ತೆರಿಗೆ ಇಲಾಖೆ ಮತ್ತು ಸಂಬಳಕ್ಕೆ ಸಂಬಂಧಿಸಿದ ಹೊಸ ನಿಯಮಗಳು ಫೆಬ್ರವರಿ 1 ರಿಂದ ಪ್ರಾರಂಭವಾಗಲಿವೆ. ಹೀಗಾಗಿ ಹೊಸ ನಿಯಮಗಳನ್ನು ಮುಂಚಿತವಾಗಿ ತಿಳಿದುಕೊಳ್ಳುವುದು ಮುಖ್ಯ. ಏಕೆಂದರೆ ಪ್ರತಿ ತಿಂಗಳು ಹೊಸ ನಿಯಮಗಳು ಲಭ್ಯವಾಗುತ್ತಿವೆ. ವಿಶೇಷವಾಗಿ ಬ್ಯಾಂಕುಗಳು, ವಾಹನಗಳು ಮತ್ತು ಆದಾಯದ ವಿಷಯದಲ್ಲಿ, ತೆರಿಗೆಯ ವಿಷಯದಲ್ಲಿ ನಿಯಮಗಳು ಬದಲಾಗುತ್ತಿವೆ.