(ನ್ಯೂಸ್ ಕಡಬ) newskadaba.com. ಅಮೆರಿಕ , ಜ.28. ಪೊಲೀಸರ ಹೊಡೆತಕ್ಕೆ ಕಪ್ಪುವರ್ಣೀಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೃತನನ್ನು ಟೈರ್ ನಿಕೊಲಸ್ ಎಂದು ಗುರುತಿಸಲಾಗಿದೆ.
ಮುಖಕ್ಕೆ ಗುದ್ದುವುದು, ಬೂಟುಗಾಲಿನಿಂದ ತುಳಿಯುವುದು ಹಾಗೂ ಲಾಠಿ ಹೊಡೆತಗಳನ್ನು ತಡೆಯಲು ಆಗದೆ ಟೈರ್ ನಿಕೊಲಸ್ ಸಾವನ್ನಪ್ಪಿದ್ದಾನೆ. ಸಾಯುವ ಮೊದಲು ಆತ ‘ಮಾಮ್’ (ಅಮ್ಮ) ಎಂದು ಹಲವು ಬಾರಿ ಕೂಗಿರುವುದು ಜನರ ಮನಸ್ಸು ಕಲಕಿದೆ. ಮೆಂಫಿಸ್ ಅಧಿಕಾರಿಗಳು ಇದೀಗ ಘಟನೆಯ ವಿಡಿಯೊ ಬಿಡುಗಡೆ ಮಾಡಿದ್ದಾರೆ. ಕಪ್ಪುವರ್ಣೀಯರೇ ಆಗಿರುವ ಪೊಲೀಸರು ನಿಕೊಲಸ್ನನ್ನು ಬೆನ್ನಟ್ಟುವುದು, ಒಂದು ಕಾರ್ಗೆ ಅವನನ್ನು ಒರಗಿಸಿ ಥಳಿಸುವುದು, ತಮ್ಮ ಕೃತ್ಯವನ್ನು ಸಂಭವಿಸುವ ದೃಶ್ಯಗಳು ಈ ವಿಡಿಯೊದಲ್ಲಿ ಸೆರೆಯಾಗಿವೆ.
ನಿಕೊಲಸ್ ಇದ್ದ ಕಾರನ್ನು ಪೊಲೀಸ್ ಸಿಬ್ಬಂದಿಯೊಬ್ಬರು ತಡೆದು, ಅವರನ್ನು ಹೊರಗೆ ಎಳೆದರು. ‘ನಾನೇನೂ ಮಾಡಿಲ್ಲ ಎಂದು ನಿಕೊಲಸ್ ಕೂಗಿಕೊಂಡರು ಪೊಲೀಸರು ಬಿಡದೆ ಆತನನ್ನು ತಳಿಸಲು ಆರಂಭಿಸಿದರು. ಈ ವೇಳೆ ನಿಕೊಲಸ್ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.