ಆಸ್ಪತ್ರೆಗೆ ಬಂದಿದ್ದ ಮಹಿಳೆ ಮೇಲೆ ಪೊಲೀಸ್ ಪೇದೆಯಿಂದ ಲೈಂಗಿಕ ದೌರ್ಜನ್ಯ !

(ನ್ಯೂಸ್ ಕಡಬ)newskadaba.com ಚಾಮರಾಜನಗರ, ಜ.28. ಗಡಿಜಿಲ್ಲೆಯಲ್ಲಿ ರಕ್ಷಣೆ ನೀಡಬೇಕಾದ ಖಾಕಿ ವರ್ಗವು ಕೆಲ ಆರಕ್ಷಕರಿಂದ ಕೆಲ ಮಹಿಳೆಯರು ಲೈಂಗಿಕ ತೃಷೆಗೊಳಪಟ್ಟ ಪ್ರಕರಣಗಳು ದಿನೆ ದಿನೆ ಹೆಚ್ಚಾಗುತ್ತಿದ್ದು ಇಲಾಖೆ ಮುಜುಗರಕ್ಕೊಳಪಡಬೇಕಾದ ಸ್ಥಿತಿ ಎದುರಾಗಿದೆ. ಜಿಲ್ಲೆಯ ಠಾಣೆಯೊಂದರ ಪೇದೆಯಿಂದ ನೊಂದು ಮಹಿಳೆ ಆತ್ಮಹತ್ಯ ಮಾಡಿಕೊಂಡು ಎಮ್.ಎಲ್.ಸಿ ಆಗಿ ಪ್ರಕರಣ ಏನೂ ನಡೆದೆ ಇಲ್ಲ ಎಂಬಂತೆ ಸುಮ್ಮನಾಗಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಲು ಬಂದಿದ್ದ ಮಹಿಳೆಯೊಬ್ಬರನ್ನು ಪೊಲೀಸ್ ಪೇದೆಯೊಬ್ಬ ಪುಸಲಾಯಿಸಿ ತನ್ನ ಜೊತೆ ಕರೆದೊಯ್ದು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಮಹಿಳೆ ಜಿಲ್ಲಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ದಾಖಲಾಗಿದ್ದು ‌ಪೊಲೀಸ್ ಪೇದೆ ವಿರುದ್ದ ಪಟ್ಟಣ ಠಾಣೆಗೆ ಮಹಿಳೆ ದೂರು ನೀಡಿದ್ದಾರೆ ಎನ್ನಲಾಗಿದೆ.

Also Read  ➤ ಊಟ ಮಾಡುತ್ತಿದ್ದ ವೇಳೆ ಬಂದೆರಗಿದ ಜವರಾಯ, ಕುಳಿತಲ್ಲೇ ಕೊನೆಯುಸಿರೆಳೆದ ವ್ಯಕ್ತಿ!

error: Content is protected !!
Scroll to Top