ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ➤ ‘ಇಂಡಿಯಾ ಪೋಸ್ಟ್’ನಲ್ಲಿ 40,889 ಹುದ್ದೆಗಳಿಗೆ ಅರ್ಜಿ ಆಹ್ವಾನ..!

(ನ್ಯೂಸ್ ಕಡಬ)newskadaba.com ಜ.28. ಭಾರತೀಯ ಪೋಸ್ಟ್ ಗ್ರಾಮೀಣ ಡಾಕ ಸೇವಕ (ಜಿಡಿಎಸ್) ಹುದ್ದೆಗಳ ನೇಮಕಾತಿಗೆ ನಿರ್ಧರಿಸಿದ್ದು, ಬರೋಬ್ಬರಿ 40,889 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ( www.indiapostgdsonline.gov.in ) ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ವರದಿ ತಿಳಿಸಿದೆ.

ಹುದ್ದೆಗಳ ಮಾಹಿತಿ:

ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ)

ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ಎಬಿಪಿಎಂ)ಡಾಕ ಸೇವಕ ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

ಅರ್ಜಿ ಆರಂಭವಾಗುವ ದಿನಾಂಕ ಜನವರಿ .27 2023

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ.16 2023

Also Read  ಡಾಂಬರು ಸಾಗಿಸುತ್ತಿದ್ದ ಲಾರಿ ಪಲ್ಟಿ ➤ ಚಾಲಕ ಪ್ರಾಣಾಪಾಯದಿಂದ ಪಾರು

ವಿದ್ಯಾರ್ಹತೆ

ಯಾವುದೇ ಮಾನ್ಯತೆ ಪಡೆದ ಭಾರತ ಸರ್ಕಾರ / ರಾಜ್ಯ ಸರ್ಕಾರ / ಕೇಂದ್ರಾಡಳಿತ ಪ್ರದೇಶಗಳು ನಡೆಸುವ ಗಣಿತ ಮತ್ತು ಇಂಗ್ಲಿಷ್ (ಕಡ್ಡಾಯ ಅಥವಾ ಐಚ್ಛಿಕ ವಿಷಯವಾಗಿರಬೇಕು) 10 ನೇ ತರಗತಿಯ ಪಾಸ್‌ನ ಮಾಧ್ಯಮಿಕ ಶಾಲಾ ಪರೀಕ್ಷೆಯ ಪಾಸ್ ಪ್ರಮಾಣಪತ್ರ ಅತ್ಯಗತ್ಯ.

 

error: Content is protected !!
Scroll to Top