ವರ್ಷದಲ್ಲಿ 3 ಸಾವಿರ ಉದ್ಯೋಗ ಕಡಿತ ಮಾಡಲಿದೆ ಜರ್ಮನಿಯ ಎಸ್‌ಎಪಿ

(ನ್ಯೂಸ್ ಕಡಬ)newskadaba.com  ಫ್ರಾಂಕ್‌ಫರ್ಟ್‌, ಜ.27. ಜರ್ಮನಿಯ ಸಾಫ್ಟ್ ವೇರ್‌ ಕಂಪನಿ ಎಸ್‌ಎಪಿ ಈ ವರ್ಷದಲ್ಲಿ 3 ಸಾವಿರ ನೌಕರರನ್ನು ಕೆಲಸದಿಂದ ತೆಗೆಯಲು ಯೋಜಿಸಿರುವುದಾಗಿ ಹೇಳಿದೆ. ಮೂಲ ವಹಿವಾಟಿನ ಕಡೆಗೆ ಹೆಚ್ಚು ಗಮನ ಕೊಡುವ ಉದ್ದೇಶದಿಂದ ಕಂಪನಿಯಲ್ಲಿ ಕೆಲವು ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದೆ.

ಇದರಿಂದಾಗಿ ಕಂಪನಿಯ ಒಟ್ಟು ಉದ್ಯೋಗಿಗಳಲ್ಲಿ ಶೇಕಡ 2.5ರಷ್ಟು ಮಂದಿಗೆ ಸಮಸ್ಯೆ ಆಗುವ ಅಂದಾಜು ಮಾಡಲಾಗಿದೆ ಎಂದು ಅದು ತಿಳಿಸಿದೆ. ಕಂಪನಿಯು ಜಾಗತಿಕವಾಗಿ ಒಟ್ಟು 1.20 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.

error: Content is protected !!
Scroll to Top