(ನ್ಯೂಸ್ ಕಡಬ)newskadaba.com ಬೆಳಗಾವಿ, ಜ.27. ಕುಂದಾನಗರಿ ಬೆಳಗಾವಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರತಿನಿತ್ಯ ನೂರಾರು ಜನ ಪ್ರಯಾಣಿಸುತ್ತಿದ್ದರೂ ಈ ಮಾರ್ಗದಲ್ಲಿ ರೈಲು ವ್ಯವಸ್ಥೆ ಸಮಪರ್ಕವಾಗಿಲ್ಲ. ಬೆಳಗಾವಿ- ಮೈಸೂರು ನಡುವೆ ಪ್ರತಿನಿತ್ಯ ರಾತ್ರಿ ರೈಲು ಸಂಚಾರ ಆರಂಭಿಸುವಂತೆ ಪ್ರಯಾಣಿಕರು ಆಗ್ರಹಿಸಿದ್ದಾರೆ.
ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗೆ ಮೊದಲಿಂದಲೂ ಬೆಳಗಾವಿ ಜಿಲ್ಲೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ತೆರಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮೈಸೂರಿನಲ್ಲಿ ಐಟಿ, ಬಿಟಿ ಉದ್ಯಮ ಅಭಿವೃದ್ಧಿ ಹೊಂದಿದ ಬಳಿಕ ಉದ್ಯೋಗಿಗಳಿಗೂ ಮೈಸೂರು ನೆಚ್ಚಿನ ತಾಣವಾಗಿದ್ದು, ಬೆಳಗಾವಿಯಲ್ಲಿ ಎಂಜಿನಿಯರಿಂಗ್ ಕಾಲೇಜುಗಳು ಹೆಚ್ಚಿದ್ದು, ಮೈಸೂರಿನಲ್ಲಿ ಉದ್ಯೋಗದಲ್ಲಿರುವ ಬೆಳಗಾವಿ ಮೂಲದ ತಂತ್ರಜ್ಞರ ಸಂಖ್ಯೆಯೂ ಹೆಚ್ಚಾಗಿದೆ. ಇನ್ನು, ಮೈಸೂರು ಭಾಗದಿಂದ ಅಧಿವೇಶನದ ಸಂದರ್ಭದಲ್ಲಿ, ದ್ರಾಕ್ಷಿ, ಹೈನು ವಹಿವಾಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೆಳಗಾವಿಗೆ ಬರುತ್ತಾರೆ.