(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.27. ಪ್ರಶಸ್ತಿ ಬಂದಿರುವುದು ಅಚ್ಚರಿ ಮೂಡಿಸಿತ್ತು. ಪ್ರಶಸ್ತಿಗೆ ನನ್ನನ್ನು ಯಾರು ನಾಮಿನೇಟ್ ಮಾಡಿದ್ದಾರೆ ಎಂಬುದು ನನಗೂ ಗೊತ್ತಿಲ್ಲ. ನಾನು ಮಾಡುವ ಸಣ್ಣ ಕೆಲಸಕ್ಕಾಗಿ ಜನರು ನನ್ನನ್ನು ಮೂರನೇ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯೊಂದಿಗೆ ಗುರುತಿಸಿರುವುದು ದೊಡ್ಡ ಗೌರವ ಎಂದು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ಹೇಳಿದ್ದಾರೆ.
ಪ್ರಶಸ್ತಿ ಲಭಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, 17 ವರ್ಷಗಳ ಹಿಂದೆ ಪದ್ಮಶ್ರೀ ಪಡೆದಿದ್ದೆ ಈಗ ಪದ್ಮಭೂಷಣ ಪ್ರಶಸ್ತಿ ಲಭಿಸಿರುವುದು ಮತ್ತಷ್ಟು ಸ್ಫೂರ್ತಿ ನೀಡಿದೆ ಎಂದು ಹೇಳಿದ್ದಾರೆ. ಶಿಕ್ಷಣ ತಜ್ಞೆಯಾಗಿ, ಲೋಕೋಪಕಾರಿಯಾಗಿ, ಇನ್ಫೋಸಿಸ್ ಫೌಂಡೇಶನ್‌ನ ಸಂಸ್ಥಾಪಕಿಯಾಗಿ ಮತ್ತು ಅಧ್ಯಕ್ಷೆಯಾಗಿ ಚಿರಪರಿಚಿತರಾಗಿದ್ದಾರೆ. ಸುಧಾಮೂರ್ತಿಯವರು ಖ್ಯಾತ ಲೇಖಕಿಯೂ ಆಗಿದ್ದಾರೆ, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ, ಅವುಗಳನ್ನು ಟಿವಿ ಮತ್ತು ಸಿನೆಮಾಕ್ಕೆ ಅಳವಡಿಸಲಾಗಿದೆ.
