ಮಂಗಳೂರು: ವಿಮಾನ ನಿಲ್ದಾಣ ಭದ್ರತೆಗೆ ಮ್ಯಾಕ್ಸ್‌ ಮತ್ತು ರೇಂಜರ್‌ ಶ್ವಾನಗಳ ಸೇರ್ಪಡೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.27. ಗಣ ರಾಜ್ಯೋತ್ಸವ ಸಂಭ್ರಮದ ಸಂದರ್ಭದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಪಡೆ ಸಿಐಎಸ್‌ಎಫ್ ಶ್ವಾನದಳಕ್ಕೆ ಬೆಲ್ಜಿಯನ್‌ ಮೆಲಿನೊಯ್ಸ ತಳಿಯ ಮ್ಯಾಕ್ಸ್‌ ಮತ್ತು ರೇಂಜರ್‌ ಹೆಸರಿನ ಎರಡು ಶ್ವಾನಗಳು ಸೇರ್ಪಡೆಗೊಂಡಿವೆ.

ಬೆಂಗಳೂರಿನ ತರಳುವಿನಲ್ಲಿ ಸಿಐಎಸ್‌ಎಫ್‌ನ ಶ್ವಾನ ಸಂತಾನೋತ್ಪತ್ತಿ ಮತ್ತು ತರಬೇತಿ ಕೇಂದ್ರದಲ್ಲಿ ನಡೆದ ತರಬೇತಿಯಲ್ಲಿ ಮ್ಯಾಕ್ಸ್ ಪ್ರಥಮ ಮತ್ತು ರೇಂಜರ್ ದ್ವಿತೀಯ ಸ್ಥಾನ ಪಡೆದಿದೆ.

ಗಣರಾಜ್ಯೋತ್ಸವ ಸಮಾರಂಭದ ಸಂದರ್ಭ ಸಿಐಎಸ್‌ಎಫ್‌ನ ಏರ್‌ಪೋರ್ಟ್ ಸೆಕ್ಯುರಿಟಿ ಗಾರ್ಡ್ಸ್ (ಎಎಸ್‌ಜಿ) ವಿಭಾಗದಿಂದ ನಾಯಿಗಳನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಸಿಬಂದಿಗಳು ರಕ್ಷಣಾ ತಂತ್ರಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನೂ ನೀಡಿದರು.

Also Read  150 ಕ್ಯಾಬಿನ್ ಸಿಬ್ಬಂದಿಯನ್ನು ವೇತನವಿಲ್ಲದೆ ರಜೆ ನೀಡಿ ಕಳುಹಿಸಿದ ವಿಮಾನಯಾನ ಸಂಸ್ಥೆ

 

error: Content is protected !!
Scroll to Top