➤ನೃತ್ಯ ಮಾಡುತ್ತಿರುವಾಗಲೇ ಆರೋಗ್ಯ ಸಿಬ್ಬಂದಿ ಕುಸಿದು ಬಿದ್ದು ಮೃತ್ಯು..!

(ನ್ಯೂಸ್ ಕಡಬ) newskadaba.com. ಸಿಂಧನೂರು, ಜ. 26. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೋಲಾಟ ಆಡುವಾಗ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಹೃದಯಘಾತದಿಂದ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

ತಾಲೂಕು ಸಾರ್ವಜನಿಕ ಆಸ್ಪತ್ರೆಯ ಎಎರ್‌ಟಿ

ಕೇಂದ್ರದ ಸಿಬ್ಬಂದಿ ಮಹಾಂತೇಶ ಪೂಜಾರ ಮೃತಪಟ್ಟ ಸಿಬ್ಬಂದಿಯಾಗಿದ್ದಾರೆ.ಇಂದು ತಾಲೂಕಾ ಕ್ರೀಡಾಂಗಣದಲ್ಲಿ ಈ ದುರಂತ ಸಂಭವಿಸಿದೆ. ಕ್ರೀಡಾಂಗಣದಲ್ಲಿ ಶಾಲಾ ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಾಲೂಕಾ ಆಡಳಿತದಿಂದ ಹಮ್ಮಿಕೊಳ್ಳಲಾಗಿತ್ತು ಮಕ್ಕಳ ಜೊತೆ ಕೋಲಾಟ ಆಡುವ ಸಮಯದಲ್ಲಿ ನೆಲಕ್ಕೆ ಕುಸಿದು ಬಿದ್ದು ಹೃದಯಘಾತದಿಂದ ಮೃತಪಟ್ಟಿದ್ದಾರೆ.  ಸಾವಿನ ಸುದ್ದಿ ತಿಳಿದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

Also Read  ವಿದ್ಯುತ್ ಶಾಕ್ ನೀಡಿ ವ್ಯಕ್ತಿಯ ಬರ್ಬರ ಕೊಲೆ

error: Content is protected !!
Scroll to Top