ವಿದ್ಯುತ್‌ ಬಿಲ್‌ ಕೇಳಿದ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ➤ ₹ 9 ಸಾವಿರ ವಿದ್ಯುತ್‌ ಬಿಲ್‌ ಬಾಕಿ

(ನ್ಯೂಸ್ ಕಡಬ)newskadaba.com  ಬಳ್ಳಾರಿ, ಜ.26. ಕಳೆದ ಹಲವು ತಿಂಗಳಿಂದ ಬೇಕಾಬಿಟ್ಟಿಯಾಗಿ ವಿದ್ಯುತ್‌ ಉಪಯೋಗಿಸಿ, ಮಾಸಿಕ ಬಿಲ್‌ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾನೆ. ಕರೆಂಟ್‌ ಬಿಲ್‌ ಬರೋಬ್ಬರಿ 9 ಸಾವಿರ ರೂ.ಗೆ ತಲುಪಿದ್ದು, ಅದನ್ನು ಪಾವತಿಸಿಕೊಳ್ಳಲು ಬಂದಿದ್ದ ಗುಲ್ಬರ್ಗಾ ವಿದ್ಯುತ್‌ ಸರಬರಾಜು ಕಂಪನಿ ಲಿ. (ಜೆಸ್ಕಾಂ) ಅಧಿಕಾರಿಗೆ ಗ್ರಾಹಕನೊಬ್ಬ ಮನಸೋ ಇಚ್ಛೆ ಹಲ್ಲೆ ಮಾಡಿರುವುದು ಕಂಡುಬಂದಿದೆ.

ರಾಜ್ಯದಲ್ಲಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗದಮ ವಿಭಾಗಗಳಿಂದ ಪ್ರಾದೇಶಿಕವಾಗಿ ಪ್ರತಿ ಮನೆ ಮನೆಗೂ ವಿದ್ಯುತ್‌ ಸಂಪರ್ಕ ಕಲ್ಪಿಸಿ, ವಿದ್ಯುತ್‌ ಬಳಸಿದ್ದಕ್ಕಾಗಿ ಮಾಸಿಕ ಬಿಲ್‌ ಪಾವತಿಸಿಕೊಳ್ಳಲಾಗುತ್ತದೆ. ಆದರೆ, ಬಳ್ಳಾರಿಯ ಮಿಲ್ಲರ್ ಪೇಟೆಯ ಮನೆಯೊಂದರಲ್ಲಿ ಜೆಸ್ಕಾಂನಿಂದ ವಿದ್ಯುತ್‌ ಸಂಪರ್ಕ ಪಡೆದುಕೊಂಡು ಬೇಕಾಬಿಟ್ಟಿಯಾಗು ಉಪಯೋಗ ಮಾಡಿಕೊಂಡಿದ್ದಾನೆ. ಮಾಸಿಕವಾಗಿ ಪಾವತಿಸಬೇಕಾದ ಕರೆಂಟ್‌ ಬಿಲ್‌ ಅನ್ನು ಪಾವತಿಸದೇ ಬಾಕಿ ಉಳಿಸಿಕೊಂಡು ಒಂಭತ್ತು ಸಾವಿರ ರೂ. ಬಿಲ್‌ ಆಗುವರೆಗೂ ಸುಸ್ತಿದಾರ ಆಗಿದ್ದಾನೆ. ಈಗ ಹಣ ಕೇಳಲು ಬಂದ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ದರ್ಪ ತೋರಿದ್ದಾನೆ.

Also Read  ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ➤ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಪ್ರವಾಸ

 

error: Content is protected !!
Scroll to Top