ಗುತ್ತಿಗಾರು: ನೀರಿನ ಟ್ಯಾಂಕಿಗೆ ಬಿದ್ದು ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.15. ಮನೆಯ ಪಕ್ಕದಲ್ಲಿದ್ದ ನೀರಿನ ಟ್ಯಾಂಕಿಗೆ ನೀರು ನೋಡಲು ಹೋದ ಸಮಯದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಬಳ್ಳಕ ಎಂಬಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ. ಮೃತ ದುರ್ದೈವಿಯನ್ನು ನಿವೃತ್ತ ಯೋಧ ಹಾಗೂ ಸುಬ್ರಹ್ಮಣ್ಯ ಕಾರ್ಪೋರೇಷನ್ ಬ್ಯಾಂಕಿನ ಉದ್ಯೋಗಿ ಚೆನ್ನಪ್ಪ ಗೌಡರ ಪತ್ನಿ ಯಮುನಾವತಿ(44) ಎಂದು ಗುರುತಿಸಲಾಗಿದೆ.

ಟ್ಯಾಂಕಿಗೆ ಪ್ರತಿನಿತ್ಯ ನೀರು ತಮ್ಮ ಮನೆಯ ಬೋರ್ವೆಲ್ ನಿಂದ ಪಂಪ್ ಮೂಲಕ ಹಾಯಿಸಲಾಗುತ್ತಿತ್ತು. ಗುರುವಾರ ಬೆಳಗಿನ ಜಾವ ಯಮುನಾವತಿ ಪಂಪ್ ಚಾಲನೆ ಮಾಡಿ ಟ್ಯಾಂಕಿಗೆ ನೀರು ನೋಡಲು ಹೋಗಿದ್ದಾರೆ. ಟ್ಯಾಂಕ್ ಮೆಟ್ಟಿಲು ಹತ್ತಿ ನೋಡುತ್ತಿದ್ದ ವೇಳೆ ಕಾಲುಜಾರಿ ಆಯತಪ್ಪಿ ಟ್ಯಾಂಕ್ ಒಳಗೆ ಬಿದ್ದು ನೀರಿನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸುಳ್ಯ ಪೊಲೀಸ್ ಠಾಣಾ ಎಸ್ಐ ಚಂದ್ರಶೇಖರ್ ಹಾಗೂ ಸುಬ್ರಹ್ಮಣ್ಯ ಠಾಣಾ ಎಎಸ್ಐ ಚಂದಪ್ಪ ಸ್ಥಳ ಪರಿಶೀಲನೆ ನಡೆಸಿ ಶವ ಮಹಜರು ನಡೆಸಿದರು. ಈ ಬಗ್ಗೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top