ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಹಾಲ್ ಟಿಕೆಟ್ ತಿದ್ದುಪಡಿ..! ➤ ಜ. 30 ರವರೆಗೆ ಅವಕಾಶ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.26. ಮಾರ್ಚ್ ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಸಿದ್ಧಪಡಿಸಲಾಗಿದೆ. ಪ್ರವೇಶ ಪತ್ರಗಳಲ್ಲಿ ಅಗತ್ಯವಿದ್ದರೆ ತಿದ್ದುಪಡಿ ಮಾಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜನವರಿ 30ರವರೆಗೆ ಅವಕಾಶ ಕಲ್ಪಿಸಿದೆ.

ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳ ಹಾಲ್ ಟಿಕೆಟ್ ಗಳನ್ನು ಮಂಡಳಿಯ ಪಿಯು ಎಕ್ಸಾಮ್ ಪೋರ್ಟಲ್ ನಲ್ಲಿ ಲಾಗಿನ್ ಆಗುವ ಮೂಲಕ ಡೌನ್ಲೋಡ್ ಮಾಡಿ ಮಾಡಿಕೊಂಡು ತಿದ್ದುಪಡಿ ಮಾಡಲು ಜನವರಿ 25ರವರೆಗೆ ಅವಕಾಶ ನೀಡಲಾಗಿತ್ತು. ಕಾಲಾವಕಾಶ ವಿಸ್ತರಿಸಲು ಕೆಲವು ಪ್ರಾಂಶುಪಾಲರು ಮನವಿ ಮಾಡಿದ್ದರಿಂದ ಜನವರಿ 30ರವರೆಗೆ ವಿಸ್ತರಿಸಲಾಗಿದ್ದು, ಈ ಅವಧಿ ಒಳಗೆ ತಿದ್ದುಪಡಿ ಮಾಡಿಕೊಳ್ಳತಕ್ಕದ್ದು. ಮತ್ತೊಮ್ಮೆ ಅವಧಿ ವಿಸ್ತರಿಸುವುದಿಲ್ಲ ಎಂದು ಹೇಳಲಾಗಿದೆ.

Also Read  ಹೊಸ ವರ್ಷಾಚರಣೆ ಪಾರ್ಟಿ ವೇಳೆ ಗೆಳೆಯನಿಗೆ ಚೂರಿ ಇರಿತ  ➤ ಆರೋಪಿ ಅರೆಸ್ಟ್                                    

 

error: Content is protected !!
Scroll to Top