ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದ ನೌಕರ ಕುಸಿದು ಬಿದ್ದು ಮೃತ್ಯು..!

(ನ್ಯೂಸ್ ಕಡಬ)newskadaba.com  ಸಿಂಧನೂರು, ಜ.26. ನಗರದ ತಾಲೂಕು ಕ್ರೀಡಾಂಗಣದಲ್ಲಿ 74ನೇ ಗಣರಾಜ್ಯೋತ್ಸವದ ವೇಳೆ ಕೋಲಾಟ ಆಡುತ್ತಿದ್ದ ನೌಕರ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಸ್ಥಳೀಯ ಸರಕಾರಿ ಆಸ್ಪತ್ರೆಯ ನೌಕರ ಮಹಾಂತೇಶ ಪೂಜಾರ್ (40) ಮೃತ ಎಂದು ಗುರುತಿಸಲಾಗಿದೆ.

ಗರಡು ಗಮನ ಕೀರ್ತನೆಗೆ ತಂಡದೊಟ್ಟಿಗೆ ಕೋಲಾಟದಲ್ಲಿ ನಿರತರಾಗಿದ್ದಾಗ ದಿಢೀರ್ ಮೈದಾನದಲ್ಲೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ನಗರಸಭೆಯ ಕಾರಿನಲ್ಲಿ ಆಸ್ಪತ್ರೆಗೆ ಕರೆ ತಂದರು. ಆಸ್ಪತ್ರೆಗೆ ಕರೆ ತರುವ ಮುನ್ನವೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.

Also Read  ಪ್ರೌಢಶಾಲಾ ಶಿಕ್ಷಕರಿಗೆ ರಾಜ್ಯ ಸರಕಾರದಿಂದ 'ಭಡ್ತಿ ಭಾಗ್ಯ' ► ಮುಂದಿನ ವರ್ಷ ಕೆಪಿಎಸ್ಸಿ ಮಾದರಿಯಲ್ಲಿ 10 ಸಾವಿರ ಶಿಕ್ಷಕರ ನೇಮಕಾತಿ

 

error: Content is protected !!
Scroll to Top