ಮೊದಲು ಹಣ; ಉಳಿದಿದ್ದೆಲ್ಲಾ ನಂತರ..! ➤ ನಾಲ್ವರ ಜಗಳದಿಂದ ಬಯಲಾಯ್ತು ವೇಶ್ಯಾವಾಟಿಕೆ ದಂಧೆ

(ನ್ಯೂಸ್ ಕಡಬ)newskadaba.com ದಾವಣಗೆರೆ, ಜ.26. ಹೊರರಾಜ್ಯಗಳಿಂದ ಯುವತಿಯರನ್ನು ಕರೆತಂದು ರಾಜ್ಯದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲು ತೀರ್ಮಾನಿಸಿದ್ದರು. ಅದರಂತೆ ಗುಜರಾತ್ನಿಂದ ಇಬ್ಬರು ಯುವತಿಯರನ್ನು ದಾವಣಗೆರೆಗೆ ಕರೆತಂದಿದ್ದರು. ಶಿವಮೊಗ್ಗ ಮೂಲದ ಇಬ್ಬರು ವ್ಯಕ್ತಿಗಳೊಂದಿಗೆ ವೇಶ್ಯಾವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಸೂಚಿಸಿದ್ದರು.


ಆದರೆ ಕೊನೆಯ ಕ್ಷಣದಲ್ಲಿ ಆಗಿದ್ದೇ ಬೇರೆ. ಗುಜರಾತ್ ಮೂಲದ ಯುವತಿರು ಹಾಗೂ ವೇಶ್ಯಾವಾಟಿಕೆಗೆ ಕರೆಸಿದ್ದವರ ನಡುವೆ ಹಣದ ವಿಚಾರವಾಗಿ ಜಗಳ ಆರಂಭವಾಗಿದೆ. ಇದರಿಂದ ಸಿಟ್ಟಾದ ಯುವತಿಯರು ದಾವಣಗೆರೆಗೆ ಕರೆಯಿಸಿ ವೇಶ್ಯಾವಾಟಿಕೆ ಯತ್ನಿಸಿದ ಕುರಿತು ಪೊಲೀಸ್ ದೂರು ನೀಡಿದ್ದಾರೆ. ಸದ್ಯ ಹಣದ ವಿಚಾರವಾಗಿ ಆರಂಭವಾದ ಜಗಳದಿಂದ ನಡೆಯಬೇಕಿದ್ದ ವೇಶ್ಯಾವಾಟಿಕೆ ದಂಧೆ ಬಯಲಾಗಿದೆ.

Also Read  ಮೇಕೆದಾಟು ಯೋಜನೆಗೆ 1 ಸಾವಿರ ಕೋಟಿ ರೂ ಅನುದಾನ ಘೋಷಣೆ...!

error: Content is protected !!
Scroll to Top