ಕರಾವಳಿಯಲ್ಲಿ ಮುಂದುವರಿದ ನೈತಿಕ ಪೊಲೀಸ್ ಗಿರಿ

(ನ್ಯೂಸ್ ಕಡಬ)newskadaba.com  ಧರ್ಮಸ್ಥಳ, ಜ.26. ಯುವತಿಯೊಂದಿಗೆ ಲಾಡ್ಜ್ ನಲ್ಲಿ ಇದ್ದಾನೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮ್ ಯುವಕನೊಬ್ಬನಿಗೆ ಹಲ್ಲೆ ನಡೆಸಿದ ಘಟನೆ ಇಲ್ಲಿನ ಕನ್ಯಾಡಿಯಲ್ಲಿ ವರದಿಯಾಗಿದೆ.

ಧರ್ಮಸ್ಥಳದ ಕನ್ಯಾಡಿಯ ವಸತಿಗೃಹದಲ್ಲಿ ಕೋಣೆ ಪಡೆಯಲು ಪ್ರಯತ್ನಿಸಿದ ಚಿತ್ರದುರ್ಗದ ದಾದಾ ಪೀರ್ ಮತ್ತು ಉಮಾ ಎಂಬುವವರನ್ನು ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿ ಪೋಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಪೋಲೀಸರು ಪೋಷಕರಿಗೆ ಮಾಹಿತಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Also Read  ಆ. 29ರಂದು ವಿಧಾನ ಪರಿಷತ್ ಸಭಾಪತಿಯವರ ಪ್ರವಾಸ

error: Content is protected !!
Scroll to Top