ಬ್ರೇಕಿಂಗ್ ನ್ಯೂಸ್: ಯಡಿಯೂರಪ್ಪರಿಗೆ ಹೃದಯಾಘಾತ ► ಯಡಿಯೂರಪ್ಪರ ಅಭಿಮಾನಿಗಳನ್ನು ಬೇಸ್ತು ಬೀಳಿಸಿದ ಸುಳ್ಳು ಸುದ್ದಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.18. ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ರವರಿಗೆ ಹೃದಯಾಘಾತವಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಈ ಹಿಂದಿನ ಫೊಟೊ ಹಾಕಿ ಯಾರೋ ಕೀಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ ಘಟನೆ ಸೋಮವಾರದಂದು ನಡೆದಿದೆ.

ಅವರು ಇಂದು ತನ್ನ ಡಾಲರ್ಸ್ ಕಾಲೋನಿಯ ಸ್ವಗ್ರಹದಲ್ಲಿ ಗುಜರಾತ್‌ನ ಚುನಾವಣೆಯ ಫಲಿತಾಂಶವನ್ನು ವೀಕ್ಷಿಸುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹರಡಲಾಗಿತ್ತು. ಇದರಿಂದಾಗಿ ಅಭಿಮಾನಿಗಳಲ್ಲಿ ಕೆಲಕಾಲ ಆತಂಕ ಉಂಟಾಗಿದ್ದು, ಯಡಿಯೂರಪ್ಪರ ಮನೆ ಕಡೆಗೆ ಧಾವಿಸಿದಾಗ ಅವರು ಗುಜರಾತ್ ಜಯಭೇರಿಯ ಸಂಭ್ರಮದಲ್ಲಿದ್ದರು. ಇದು ಸುಳ್ಳು ಸುದ್ದಿ ಎಂದು ತಿಳಿದು ತಾವು ಬೇಸ್ತು ಬಿದ್ದುದನ್ನು ಅರಿತ ಯಡಿಯೂರಪ್ಪರ ಅಭಿಮಾನಿಗಳು ಸಮಾಧಾನದ ನಿಟ್ಟುಸಿರು ಬಿಟ್ಟರು.

Also Read  ಕನಸು-ಆಕಾಂಕ್ಷೆಗಳಿಂದ ಕೂಡಿದ ಪರಿಶ್ರಮದಿಂದ ಶ್ರೇಷ್ಠ ಉದ್ಯಮಿಗಳಾಗಲು ಸಾಧ್ಯ ➤ ಶಾಸಕ ವೇದವ್ಯಾಸ್ ಕಾಮತ್

error: Content is protected !!
Scroll to Top