ಮಲ್ಪೆ ಮೀನುಗಾರರ ಬಲೆಗೆ ಬಿದ್ದ ಅಪರೂಪದ ‘ಗೋಲ್ಡನ್ ಅಂಜಲ್’ ಫಿಶ್ 

(ನ್ಯೂಸ್ ಕಡಬ)newskadaba.com ಮಂಗಳೂರು, ಜ.25. ಮಲ್ಪೆಯ ಮೀನುಗಾರರ ಬಲೆಗೆ ಅಪರೂಪದ “ಗೋಲ್ಡನ್ ಅಂಜಲ್ ಫಿಶ್ ಬಿದ್ದಿದೆ. ಅಟ್ಲಾಂಟಿಕ್ ಸರೋವರದಲ್ಲಿ ಹೆಚ್ಚಾಗಿ ಕಂಡುಬರುವ ಈ ಅಪರೂಪದ ಮೀನು ತನ್ನ ಬಂಗಾರ ಬಣ್ಣದಿಂದಲೇ ಆಕರ್ಷನೀಯವಾಗಿದೆ.

ಮಲ್ಪೆ ಕಡಲ ತೀರದ ಮೀನುಗಾರರು ದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಇದೇ ವೇಳೆ ಅವರ ಬಲೆಗೆ 16 ಕೆಜಿಯ ಬಂಗಾರ ಬಣ್ಣದ ಮೀನು ಬಿದ್ದಿದೆ. ದಡಕ್ಕೆ ಈ ಮೀನನ್ನು ತಂದ ಬಳಿಕ ಈ ಅಪರೂಪದ ಮೀನು ಖರೀದಿಗಾಗಿ ಭಾರಿ ಪೈಪೋಟಿ ನಡೆದಿತ್ತು.  ಗೋಲ್ಡನ್ ಅಂಜಲ್ ಮೀನು ಹೆಚ್ಚಾಗಿ ಅಟ್ಲಾಂಟಿಕ್ ಸರೋವರದಲ್ಲಿ ಕಂಡು ಬರುತ್ತದೆ. ಇದಲ್ಲದೆ ಪ್ರಾಕೃತಿಕ ವೈಚಿತ್ರದಿಂದಾಗಿ ಇಲ್ಲವೇ ಅನುವಂಶಿಕದಿಂದಾಗಿ ಈ ಮೀನಿಗೆ ಬಂಗಾರ ಬಣ್ಣದ ಬರಲು ಸಾಧ್ಯವಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Also Read  ಅಂಗನವಾಡಿ ನೇಮಕಾತಿ ➤ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

error: Content is protected !!
Scroll to Top