(ನ್ಯೂಸ್ ಕಡಬ)newskadaba.com ಉಜಿರೆ, ಜ.25. 74ನೇ ಗಣರಾಜ್ಯೋತ್ಸವದ ಪ್ರಯುಕ್ತ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಏಳು ಎನ್‌ಸಿಸಿ ಕೆಡೆಟ್‌ಗಳು ಆಯ್ಕೆಯಾಗಿದ್ದಾರೆ.
ಗಣರಾಜ್ಯೋತ್ಸವದ ಪಥಸಂಚಲನ, ಶಿಪ್ ಮಾಡೆಲಿಂಗ್, ಗಾರ್ಡ್ ಆಫ್ ಹಾನರ್, ಪ್ರಧಾನಿ ನಿವಾಸದಲ್ಲಿ ಆಯೋಜಿತವಾಗುವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರಧಾನಮಂತ್ರಿ ರ್ಯಾಮಲಿಯ ಉದ್ದೇಶಕ್ಕಾಗಿ ಆಯ್ಕೆಯಾಗಿರುವ ತಂಡಗಳಲ್ಲಿ ಕಾಲೇಜಿನ ಎನ್‌ಸಿಸಿ ಕೆಡೆಟ್‌ಗಳು ಪ್ರಾಶಸ್ತ್ಯ ಪಡೆದಿದ್ದಾರೆ.
ಕಾಲೇಜಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಾಲೇಜಿನ ಏಳು ಕೆಡೆಟ್‌ಗಳು ರಾಷ್ಟ್ರಮಟ್ಟದ ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕಾಗಿ ಆಯ್ಕೆಯಾಗಿದ್ದಾರೆ. ಶಿವಮೊಗ್ಗ, ಮಡಿಕೇರಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಎನ್‌ಸಿಸಿ ಮಂಗಳೂರು ವಲಯದಲ್ಲಿ ಒಂದೇ ಕಾಲೇಜಿನ ಏಳು ಕೆಡೆಟ್‌ಗಳು ಪ್ರತಿನಿಧಿಸುತ್ತಿರುವುದು ವಿಶಿಷ್ಟ ಸಾಧನೆ.