ಚೀನಾಗೆ ಶಾಕ್ ಕೊಟ್ಟ ತಾಲಿಬಾನ್ ಸರಕಾರ  ➤  ಬೆಲೆ ಬಾಳುವ ಕಲ್ಲುಗಳ ಕಳ್ಳಸಾಗಣೆ ಮಾಡುತ್ತಿದ್ದವರ ಬಂಧನ

(ನ್ಯೂಸ್ ಕಡಬ)newskadaba.com ತಾಲಿಬಾನ್, ಜ.25. ಒಂದಲ್ಲ ಒಂದು ರೀತಿಯಲ್ಲಿ ಕಿತಾಪತಿ ಮಾಡುತ್ತಿರುವ ಚೀನಾಗ ಅಫ್ಘಾನಿಸ್ತಾನ ಬಿಸಿ ಮುಟ್ಟಿಸಿದ್ದು, ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡ ಆರೋಪದ ಮೇಲೆ ಇಬ್ಬರು ಚೀನಿ ಪ್ರಜೆಗಳನ್ನು ಬಂಧಿಸಿದೆ. 1,000 ಮೆಟ್ರಿಕ್ ಟನ್‌ ಲಿಥಿಯಂ-ಒಳಗೊಂಡಿರುವ ಬಂಡೆಗಳನ್ನು ಕಳ್ಳ ಸಾಗಾಣೆ ಮಾಡಿದ ಆರೋಪದಲ್ಲಿ ಇಬ್ಬರು ಚೀನಿ ಪ್ರಜೆಗಳು ಸೇರಿದಂತೆ ಐವರನ್ನು ಪೂರ್ವ ಅಫ್ಘಾನಿಸ್ತಾನದ ಜಲಾಲಾಬಾದ್‌ನ ಪಟ್ಟಣದಲ್ಲಿ ಬಂಧಿಸಲಾಗಿದೆ.

ಚೀನಾ ಪ್ರಜೆಗಳು ಅಫ್ಘಾನ್‌ ವ್ಯಕ್ತಿಗಳ ಜೊತೆ ಸೇರಿ ಪಾಕಿಸ್ತಾನದ ಮೂಲಕ ಬೆಲೆಬಾಳುವ ಕಲ್ಲುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಮಧ್ಯೆ ಡ್ಯುರಾಂಡ್ ಗಡಿ ರೇಖೆಯ ಉದ್ದಕ್ಕೂ ಇರುವ ಅಫ್ಘಾನ್ ಪ್ರಾಂತ್ಯಗಳಾದ ನುರಿಸ್ತಾನ್ ಮತ್ತು ಕುನಾರ್‌ನಿಂದ ಅಕ್ರಮವಾಗಿ ಈ ಬಡೆಯನ್ನು ಹೊರತೆಗೆಯಲಾಗಿದೆ. ಬಂಡೆಗಳಲ್ಲಿ 30 ಪ್ರತಿಶತದಷ್ಟು ಲಿಥಿಯಯಂ ಇದೆ ತಾಲಿಬಾನ್ ಗುಪ್ತಚರ ಅಧಿಕಾರಿಗಳು ಅಫ್ಘಾನ್‌ ದೂರದರ್ಶನ ಚಾನೆಲ್‌ಗಳಿಗೆ ತಿಳಿಸಿದ್ದಾರೆ.

Also Read  ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಹೂಟ್ಟೂರು ಸನ್ಮಾನ

error: Content is protected !!
Scroll to Top