➤ ಮಂಡ್ಯ ರೈಲಿನಡಿಗೆ ಸಿಲುಕಿ ಇಬ್ಬರು ಮಹಿಳೆಯರ ದಾರುಣ ಅಂತ್ಯ

(ನ್ಯೂಸ್ ಕಡಬ) newskadaba.com, ಬೆಂಗಳೂರು, ಜ. 25. ರೈಲಿನಡಿಗೆ ಸಿಲುಕಿ ಇಬ್ಬರು ಮಹಿಳೆಯರು ದಾರುಣವಾಗಿ ಸಾವನಪ್ಪಿರುವ ಘಟನೆ ಮಂಡ್ಯ ರೈಲು ನಿಲ್ದಾಣದಲ್ಲಿ ನಡೆದಿದೆ. ಮಾಲ್ಗುಡಿ ಎಕ್ಸ್ ಪ್ರೆಸ್ ರೈಲಿನಡಿಗೆ ಸಿಲುಕಿ ಮಹಿಳೆಯರು ದುರ್ಮರಣಕ್ಕೀಡಾಗಿದ್ದಾರೆ.

ಮೃತರಲ್ಲಿ ಒಬ್ಬರನ್ನು ಶಶಿ ಎಂದು ಗುರುತಿಸಲಾಗಿದೆ. ಈ ಮಹಿಳೆಯರು ಕಾಚಿಗುಡ ಎಕ್ಸ್ ಪ್ರೆಸ್ ನಿಂದ ಇಳಿದು ಮೈಸೂರಿಂದ ಬೆಂಗಳೂರಿಗೆ ಹೊರಟಿದ್ದ ಮಾಲ್ಗುಡಿ ಎಕ್ಸ್ ಪ್ರೆಸ್ ರೈಲು ಹತ್ತಲು ಮುಂದಾಗುತ್ತಾರೆ. ಈ ವೇಳೆ ಹಳಿ ದಾಟುವಾಗ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಅಸುನೀಗಿದ್ದಾರೆ. ಸಾವನ್ನಪ್ಪಿರುವ ವೃದ್ಧೆಯ ಮುಖ ಗುರುತು ಸಿಗದಷ್ಟು ಜಜ್ಜಿ ಹೋಗಿದೆ.

Also Read  ಇನ್ಮುಂದೆ ಸಿಮ್ ಕಾರ್ಡ್, ನೆಟ್ ವರ್ಕ್ ಇಲ್ಲದೇ ಕಾಲ್ - ಹೊಸ ಹೆಜ್ಜೆ ಇಟ್ಟ ಬಿಎಸ್ಎನ್ಎಲ್

ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

error: Content is protected !!
Scroll to Top