ಪ್ರತಿನಿತ್ಯ 3 ಸಾವಿರ ಉದ್ಯೋಗಿಗಳ ವಜಾ..!

(ನ್ಯೂಸ್ ಕಡಬ)newskadaba.com ನವದೆಹಲಿ, ಜ.25. ಬಹುರಾಷ್ಟ್ರೀಯ ಕಂಪನಿಗಳು, ಸ್ಟಾರ್ಟಪ್‌ಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ. ಆರಂಭದಲ್ಲಿ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ವಿಪ್ರೊದಂತಹ ದೊಡ್ಡ ಟೆಕ್ ಕಂಪನಿಗಳು ಅನೇಕ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿವೆ. ಈ ಬೆಳವಣಿಗೆ ಜಗತ್ತಿನಾದ್ಯಂತ ಭಾರತೀಯ ವೃತ್ತಿಪರರಲ್ಲಿ ಅಪಾರ ಒತ್ತಡ ಮತ್ತು ಆತಂಕವನ್ನು ಉಂಟುಮಾಡಿದೆ.

ಮುಂಬರುವ ದಿನಗಳಲ್ಲಿ ಇನ್ನಷ್ಟು ಕಂಪನಿಗಳು ಇದೇ ರೀತಿ ತಮ್ಮ ಉದ್ಯೋಗಿಗಳನ್ನು ವಜಾಗೊಳಿಸಲು ಯೋಜನೆ ಹಾಕಿಕೊಂಡಿದ್ದು, ಮತ್ತಷ್ಟು ಆತಂಕವನ್ನು ಹುಟ್ಟುಹಾಕಿದೆ. ಜೀವನಕ್ಕಾಗಿ ಹಣ ಸಂಪಾದನೆ ಬಹಳ ಮುಖ್ಯ, ಅದರ ಜೊತೆ ಜೊತೆಗೆ ಉದ್ಯೋಗವು ಅತ್ಯಗತ್ಯಗಳಲ್ಲೊಂದು. ಹಾಗಾಗಿ ಕಂಪನಿಗಳ ಈ ವಜಾ ಪ್ರಕ್ರಿಯೆ ಉದ್ಯೋಗಿಗಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ಕಳೆದ ಕೆಲವು ವಾರಗಳಲ್ಲಿ ಪ್ಯಾನಿಕ್ ಅಟ್ಯಾಕ್‌ ಮತ್ತು ಖಿನ್ನತೆಯ ಸಮಸ್ಯೆಯಿಂದ ವಿವಿಧ ದೊಡ್ಡ ದೊಡ್ಡ ಟೆಕ್ ಕಂಪನಿಗಳಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.

error: Content is protected !!

Join the Group

Join WhatsApp Group