ತೊಗರಿ ಬೆಳೆ ರೋಗ; ರೈತರಿಗೆ 10,000 ಪರಿಹಾರ ಘೋಷಣೆ  ➤  ಸಿಎಂ ಬೊಮ್ಮಾಯಿ                                

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.25.  ಕಲ್ಯಾಣ ಕರ್ನಾಟಕ ಭಾಗದ ತೊಗರಿ ಬೆಳೆಯುವ ಜಿಲ್ಲೆಗಳಲ್ಲಿ ನೆಟೆ ರೋಗದಿಂದ ಸಂಭವಿಸಿದ್ದ ತೊಗರಿ ಬೆಳೆ ನಾಶಕ್ಕೆ ಪ್ರತಿ ಹೆಕ್ಟೇರ್‌ಗೆ 10,000 ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಬೆಂಗಳೂರಿನಲ್ಲಿನ ಸಭೆ ಬಳಿಕ ಪರಿಹಾರ ಹಣ ಘೋಷಣೆ ಮಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.

ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ನೆಟೆ ರೋಗದಿಂದ ತೊಗರಿ ಬೆಳೆಗೆ ಸಂಭವಿಸಿದ ಬೆಳೆಹಾನಿಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸರ್ಕಾರವು ಪ್ರತಿ ಹೆಕ್ಟೇರ್ ಗೆ 10,000 ರೂ. ಗಳಂತೆ ಮಾರ್ಗಸೂಚಿಯಡಿ ಗರಿಷ್ಟ 2 ಹೆಕ್ಟೇರ್‌ಗೆ ಪರಿಹಾರ ಹಣ ಸೀಮಿತ ಮಾಡಿ ಘೋಷಿಸಲಾಗಿದೆ ಎಂದು ಅವರು ವಿವರಿಸಿದರು.

Also Read  ಸಿಡಿ ಲೇಡಿಯಿಂದ ಮತ್ತೊಂದು ವೀಡಿಯೋ ರಿಲೀಸ್ ➤ ಮತ್ತೆ ಸಂಕಷ್ಟದಲ್ಲಿ ಜಾರಕಿಹೊಳಿ

ಸುಮಾರು 02 ಲಕ್ಷ ಹೇಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಲೆ ನಾಶವಾಗಿದೆ. ಅದಕ್ಕಾಗಿ ಘೋಷಣೆಯಾದ ಪರಿಹಾರದ ಒಟ್ಟು ಮೊತ್ತವು 223 ಕೋಟಿ ರೂಪಾಯಿ ಆಗಲಿದೆ ಎಂದು ಸರ್ಕಾರ ಅಂದಾಜಿಸಿದೆ.

 

error: Content is protected !!
Scroll to Top