(ನ್ಯೂಸ್ ಕಡಬ)newskadaba.com ದಾವಣಗೆರೆ, ಜ.25. ಅಡಿಕೆ ಧಾರಣೆ ಚೇತರಿಕೆ ಕಾಣುತ್ತಿದ್ದು, ಕ್ವಿಂಟಲ್‌ಗೆ ₹ 47,000 ಗಡಿ ದಾಟಿದೆ. ಅಕ್ಟೋಬರ್‌ನಲ್ಲಿ ಅಡಿಕೆ ಧಾರಣೆ ₹ 53,000 ದಾಟಿತ್ತು. ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ ಬೆನ್ನಲ್ಲೇ ಡಿಸೆಂಬರ್‌ನಲ್ಲಿ ₹ 39,000ಕ್ಕೆ ಕುಸಿದಿತ್ತು.
ವಾರದಿಂದ ಅಡಿಕೆ ಧಾರಣೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಜನವರಿ 23ರಂದು ₹ 47,000ದ ಗಡಿ ದಾಟಿದೆ. ಹೀಗಾಗಿ ಬೆಳೆಗಾರರು ಅಡಿಕೆ ಮಾರಲು ಮುಂದಾಗುತ್ತಿದ್ದಾರೆ.
‘ಡಿಸೆಂಬರ್‌ನಲ್ಲಿ ಅಡಿಕೆ ಧಾರಣೆ ಕುಸಿದಾಗ, ಜನವರಿಯಲ್ಲಿ ಏರಿಕೆಯಾಗಬಹುದು ಎಂದು ಧೈರ್ಯ ತುಂಬಿದ್ದೆ.
ಜ. 23ರಂದು ರಾಶಿ ಅಡಿಕೆ ಕ್ವಿಂಟಲ್‌ಗೆ ಗರಿಷ್ಠ ಬೆಲೆ ₹47,659ಕ್ಕೆ ಮಾರಾಟವಾಗಿದೆ. ಕನಿಷ್ಠ ಬೆಲೆ ₹45,912 ಇತ್ತು. ಸರಾಸರಿ ₹47,005ಕ್ಕೆ ಮಾರಾಟವಾಗಿದೆ. ಬೆಟ್ಟೆ (ಸೆಕೆಂಡ್ಸ್) ಅಡಿಕೆ ಗರಿಷ್ಠ ₹34,789, ಕನಿಷ್ಠ ಬೆಲೆ ₹34,779 ಇದೆ. ಇನ್ನು ಸ್ವಲ್ಪ ದಿನ ಅಡಿಕೆ ಧಾರಣೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ’ ಎಂದು ತುಮ್ಕೋಸ್ ಅಧ್ಯಕ್ಷ ಆರ್.ಎಂ. ರವಿ ಹೇಳಿದರು.