ಮಂಗಳೂರು: ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ 2ನೇ ವಾರ್ಷಿಕೋತ್ಸವ

(ನ್ಯೂಸ್ ಕಡಬ)newskadaba.com  ಮಂಗಳೂರು, ಜ.24. ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ (ದ.ಕ. ಮತ್ತು ಉಡುಪಿ ಜಿಲ್ಲೆ) 2ನೇ ವಾರ್ಷಿಕೋತ್ಸವ ಸಮಾರಂಭವು ಶಾರದಾ ಶಾಲಾ ಮೈದಾನದಲ್ಲಿ ಜರಗಿತು. ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಸುಲ್ತಾನ್ ಬಿಲ್ಡರ್ಸ್ ಮತ್ತು ಡೆವಲಪರ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಯು.ಬಿ. ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಬ್ಯಾರಿ ಸಂಗೀತ ಕಲಾವಿದರಿಗೆ ಕ್ರಿಕೆಟ್ ಪಂದ್ಯಾಟ, ವಿಶೇಷ ಚೇತನರಿಗೆ ವೀಲ್‌ಚೇರ್ ವಿತರಣೆ, ಸಾಧಕರಿಗೆ ಸನ್ಮಾನ ಮತ್ತು ಅರ್ಹ ಕಲಾವಿದರಿಗೆ ಧನಸಹಾಯ ಹಸ್ತಾಂತರಿಸಲಾಯಿತು.

ರಾಝ್ ಕಲಾಯಿ ನಾಯಕತ್ವದ ಬ್ಯಾರಿ ಸ್ಟಾರ್ ತಂಡವು ಎರಡನೇ ಬಾರಿಗೆ ಚಾಂಪಿಯನ್ ಆಗಿ ಮೂಡಿ ಬಂದಿದ್ದು, ಸಿನಾನ್ ಚಿನ್ನು ನಾಯಕತ್ವದ ಕಿಂಗ್ಸ್ ತಂಡವು ರನ್ನರ್ ಅಪ್ ಆಗಿ ಹೊರ ಹೊಮ್ಮಿತು. ರಫೀಕ್ ಮಾಸ್ಟರ್, ಕವಿ ಸಾಹಿತಿಗಳಾದ ಹುಸೈನ್ ಕಾಟಿಪಳ್ಳ, ಬಶೀರ್ ಅಹ್ಮದ್ ಕಿನ್ಯ, ಆಶ್ರಫ್ ಅಪೋಲೊ, ರಶೀದ್ ನಂದಾವರ, ಯಾಸಿರ್ ಯಾಚಿ, ಸಾಫ್ವನ್ ಪತ್ತುಂಜಿ ಅವರನ್ನು ಸನ್ಮಾನಿಸಲಾಯಿತು.

Also Read  ಐಶ್ವರ್ಯಾ ರೈ ಹಾಗೂ ಮಗಳು ಆರಾಧ್ಯಾಗೂ ಕೊರೋನ ಪಾಸಿಟಿವ್

error: Content is protected !!
Scroll to Top