20,000 ಕೋಟಿ ದಾಟಿದ ಕೆನರಾ ಬ್ಯಾಂಕ್‌ ಜಾಗತಿಕ ವ್ಯವಹಾರ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.24. ಸಾರ್ವಜನಿಕ ವಲಯದಲ್ಲಿ ಮುಂಚೂಣಿಯಲ್ಲಿರುವ ಕೆನರಾ ಬ್ಯಾಂಕ್‌ನ ಜಾಗತಿಕ ವ್ಯವಹಾರವು ವಾರ್ಷಿಕ ಶೇ.13.63 ರಷ್ಟು ಬೆಳವಣಿಗೆಯೊಂದಿಗೆ 20 ಸಾವಿರ ಕೋಟಿ ರೂ. ಗಡಿ ದಾಟಿದೆ.

ಬ್ಯಾಂಕು ಪ್ರಸಕ್ತ ಆರ್ಥಿಕ ವರ್ಷದ (2022-2023) ಮೂರನೇ ತ್ರೈಮಾಸಿಕ ವರದಿ ಪ್ರಕಟಿಸಿದ್ದು, ನಿವ್ವಳ ಲಾಭವು 2021ರ ಡಿಸೆಂಬರ್‌ಗೆ ಹೋಲಿಸಿದರೆ ಶೇ.91.8ರಷ್ಟು ಹೆಚ್ಚಳದೊಂದಿಗೆ 2,882 ಕೋಟಿ ರು.ಗೆ ತಲುಪಿದೆ. ಒಟ್ಟಾರೆ ಜಾಗತಿಕ ಠೇವಣಿಯು ವಾರ್ಷಿಕ ಶೇ.11.5 ರಷ್ಟು ಬೆಳವಣಿಗೆಯಾಗಿ 11,63,470 ಕೋಟಿ ರು.ಗೆ ತಲುಪಿದೆ. ಸದ್ಯ ಬ್ಯಾಂಕ್‌ನ ಜಾಗತಿಕ ವ್ಯವಹಾರವು 20,14,443 ಕೋಟಿ ರು.ಗೆ ಏರಿಕೆಯಾಗಿದೆ. 2022ರ ಸೆಪ್ಟೆಂಬರ್‌ನಲ್ಲಿ ಶೇ.2.19 ರಷ್ಟುಇದ್ದ ನಿವ್ವಳ ಅನುತ್ಪಾದಕ ಆಸ್ತಿಗಳು ಶೇ.1.96ಕ್ಕೆ ಇಳಿಕೆಯಾಗಿವೆ.

Also Read  ಪನ್ಯ ಗುರಿಯಡ್ಕ ರಸ್ತೆ ಎಸ್ಸಿ/ಎಸ್ಟಿ ಅನುದಾನದಲ್ಲಿ 10ಲಕ್ಷ

 

error: Content is protected !!
Scroll to Top