ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನಿಂದಲೇ ರೇಪ್‌

(ನ್ಯೂಸ್ ಕಡಬ)newskadaba.com  ಬಾಗಲಕೋಟೆ, ಜ.24. ಅನುದಾನಿತ ಶಾಲೆಯೊಂದರ ಶಿಕ್ಷಕ ಅಪ್ರಾಪ್ತ ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಸಾವಳಗಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅನುದಾನಿತ ಶಾಲೆಯೊಂದರ ಶಿಕ್ಷಕ ಲಕ್ಷ್ಮಣ ದೇವೆಂದ್ರಪ್ಪ ಕೊಪ್ಪದ ಬಂಧಿತ ಆರೋಪಿ. ಆರೋಪಿ ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಕಾಲುವೆ ಯಲ್ಲಾಪೂರ ಗ್ರಾಮದವನು. ಕಳೆದೊಂದು ವರ್ಷದಿಂದ ತನ್ನ ಮನೆಯಲ್ಲಿ ಇಂಗ್ಲಿಷ್‌ ಟ್ಯೂಷನ್‌ ಹೇಳಿಕೊಡುವುದಾಗಿ ಕರೆಸಿಕೊಂಡು ಟ್ಯೂಷನ್‌ ಬಿಟ್ಟ ನಂತರ ಮನೆಯಲ್ಲಿ ಪತ್ನಿ ಇಲ್ಲದ ವೇಳೆ ಹಾಗೂ ಶಾಲೆ ಬಿಟ್ಟ ನಂತರ ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಇಬ್ಬರು ವಿದ್ಯಾರ್ಥಿನಿಯರು ಪಾಲಕರಿಗೆ ಮಾಹಿತಿ ನೀಡಿದ್ದರು.

Also Read  ಮತ್ತೆ ಪ್ರಧಾನಿ ಪಟ್ಟ ಏರಿದ ನರೇಂದ್ರ ಮೋದಿ ➤ ಕುಖ್ಯಾತ ಭೂಗತ ಪಾತಕಿ ಕಾಡತೊಡಗಿದೆ ಜೀವಭಯ!

 

error: Content is protected !!
Scroll to Top