ಈಜಲು ನೀರಿಗಿಳಿದ ಯುವಕ ನಾಪತ್ತೆ

(ನ್ಯೂಸ್ ಕಡಬ)newskadaba.com  ಸಾಗರ, ಜ.24. ಕೆರೆಗೆ ಈಜಲು ಹೋದ ಯುವಕನೋರ್ವ ನಾಪತ್ತೆಯಾದ ಘಟನೆ ಭೀಮನಕೋಣೆ ಕೆರೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಸಾಗರ ಪಟ್ಟಣದ ಯಶ್ವಂತ್ (22) ನಾಪತ್ತೆಯಾದ ಯುವಕ.

ಯಶ್ವಂತ್ ತನ್ನ ಸ್ನೇಹಿತರೊಂದಿಗೆ ಭೀಮನಕೋಣೆ ಕೆರೆಗೆ ಹೋಗಿದ್ದರು. ಈ ವೇಳೆ ಯಶ್ವಂತ್, ಸ್ನೇಹಿತರ ಜೊತೆ ಕೆರೆಯಲ್ಲಿ ಈಜಲು ಇಳಿದಿದ್ದಾನೆ.ಆದರೆ ಆತನಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

 

error: Content is protected !!
Scroll to Top