ಬೆಂಗಳೂರಲ್ಲಿ ಮಾನವೀಯತೆ ಮರೆತ ಜನ….! ➤  ರಕ್ತದ ಮಡುವಿನಲ್ಲಿ ಒದ್ದಾಡಿ ಯುವತಿ ಮೃತ್ಯು !

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.24. ಖಾಸಗಿ ಬಸ್ ಓವರ್ ಸ್ಪೀಡ್‌ ಆಗಿ ಬಂದು ಸೈಡ್‌ ಅಲ್ಲಿ ನಿಂತಿದ್ದ ಗಾಡಿಗೆ ಗುದ್ದಿದ ಭೀಕರ ಅಪಘಾತ ಯಶವಂತಪುರದಲ್ಲಿ ನಡೆದಿದೆ. ಅಪಘಾತದಲ್ಲಿ ಡಿಯೋ ಗಾಡಿ ಓಡಿಸುತ್ತಿದ್ದ ಯುವತಿ ತಲೆಗೆ ಗಂಭೀರ ಪೆಟ್ಟು ಬಿದ್ದು ಕೆಳಗೆ ಬಿದ್ದಿದ್ದಾರೆ. ಅರ್ಧಗಂಟೆಗಳ ಕಾಲ ರಕ್ತದ ಮಡುವಿನಲ್ಲಿ ಯುವತಿ ನರಳಾಡುತ್ತಿದ್ರೂ ಜನ ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕಿದ್ದಾರೆ.

ಗಾಡಿಯನ್ನು ಸೈಡ್‌ಗೆ ಹಾಕಿದ್ದ ವಿನುತಾ ಯಶವಂತಪುರ ಸತ್ವ ಅಪಾರ್ಟ್‌ಮೆಂಟ್‌ ಮುಂಭಾಗದ ರಸ್ತೆಯಲ್ಲಿ ಈ ಅವಘಡ ನಡೆದಿದೆ. ಡಿಯೋ ಓಡಿಸುತ್ತಿದ್ದ ವಿನುತಾ ಫೋನ್‌ನಲ್ಲಿ ಮಾತನಾಡೋಕೆ ಅಂತಾ ಗಾಡಿಯನ್ನ ಸೈಡ್‌ಗೆ ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಓವರ್ ಸ್ಪೀಡ್ ಬಂದ ಖಾಸಗಿ ಬಸ್ ಗುದ್ದಿದೆ ಎನ್ನಲಾಗಿದೆ.

Also Read  ಪ್ರಸಿದ್ದ ಕ್ರಿಕೆಟಿಗ "ಕಪಿಲ್ ದೇವ್ "ಗೆ ಹೃದಯಾಘಾತ

 

error: Content is protected !!
Scroll to Top