‘ಫೆ. 6ಕ್ಕೆ ಬೆಂಗಳೂರಿಗೆ’ ಮತ್ತೆ ಪ್ರಧಾನಿ ಆಗಮನ ➤  ‘ಮೋದಿ ರೋಡ್ ಶೋ’ಗೆ ಭರ್ಜರಿ ಪ್ಲಾನ್

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.24. ಫೆ. 6ರಂದು ಬೆಂಗಳೂರಿಗೆ ಮತ್ತೆ ಪ್ರಧಾನಿ ಆಗಮನ ಹಿನ್ನೆಲೆ ಮೆಗಾ ರೋಡ್ ಶೋಗೆ ಭರ್ಜರಿ ಪ್ಲಾನ್ ಮಾಡಲಾಗುತ್ತಿದ್ದು, ಮುಂದಿನ ಚುನಾವಣೆಗೆ ರಣತಂತ್ರ ರೂಪಿಸುತ್ತಿದ್ದಾರೆ.

ಫೆಬ್ರವರಿ 6ರಂದು ಬೆಂಗಳೂರಿನ ಹೆಚ್‌ ಎ ಎಲ್‌ನಲ್ಲಿ ಕಾರ್ಯಕ್ರಮದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ರಾಜ್ಯಕ್ಕೆ ಮತ್ತೆ ಆಗಮನ ವೇಳೆ ಬೆಂಗಳೂರು ಪ್ರಮುಖ ನಗರಗಳಲ್ಲಿ ರೋಡ್ ಶೋಗೆ ರಾಜ್ಯ ಬಿಜೆಪಿ ಮನವಿ ಮಾಡಲಾಗಿದೆ.

ಹುಬ್ಬಳ್ಳಿಯಲ್ಲಿ ನಡೆಸಿದ ರೋಡ್‌ ಶೋ ಮಾದರಿಯಲ್ಲಿ ಮೂರು ಕ್ಷೇತ್ರಗಳ ಟಾರ್ಗೆಟ್ ಮಾಡಿ ರೋಡ್ ಶೋಗೆ ತಂತ್ರ ರೂಪಿಸಲಾಗಿದೆ. ಮಹದೇವಪುರ, ಕೆ.ಆರ್.ಪುರಂ, ಸಿ.ವಿ.ರಾಮನ್ ನಗರ ಕೇಂದ್ರೀಕರಿಸಿ ರೋಡ್ ಶೋ ರೂಟ್ ಮ್ಯಾಪ್ ಮಾಡಲಾಗಿದೆ.

Also Read  ಅರಂತೋಡು: ತೆಕ್ಕಿಲ್ ಎಕ್ಸಲೆನ್ಸ್ ಅವಾರ್ಡ್ ಪ್ರಶಸ್ತಿ ಪ್ರಧಾನ ಸಮಾರಂಭ

 

 

error: Content is protected !!
Scroll to Top