(ನ್ಯೂಸ್ ಕಡಬ)newskadaba.com ನವದೆಹಲಿ, ಜ.24. ಬಹುತೇಕ ಎಲ್ಲರೂ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಾರೆ. ಇನ್ನು ಸರ್ಕಾರಿ ಉದ್ಯೋಗ ಪಡೆಯುವುದ್ರಲ್ಲಿ ಆ ವ್ಯಕ್ತಿಗೆ ಏನಿಲ್ಲವೆಂದ್ರು ವಯಸ್ಸು ಕನಿಷ್ಠ 25 ರಿಂದ 30 ವರ್ಷಗಳಾಗುತ್ತೆ. ಅದ್ರಂತೆ, ಸಧ್ಯ ಸರ್ಕಾರಿ ಉದ್ಯೋಗಗಳಿಗೆ ವಯೋಮಿತಿ 18 ವರ್ಷಗಳು ಎಂದು ಉಲ್ಲೇಖಿಸಲಾಗಿದೆ. ಆದ್ರೆ, ನೀವು 15ನೇ ವಯಸ್ಸಿನಲ್ಲಿಯೇ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸಬಹುದು. ಹೌದು, 15ನೇ ವಯಸ್ಸಿನಲ್ಲಿ ಕೆಲಸ ಪಡೆಯುವ ಅವಕಾಶ ಸಿಗಲಿದೆ.
ಸಾಮಾನ್ಯವಾಗಿ, ರೈಲ್ವೆ ಉದ್ಯೋಗಗಳಿಗೆ ಶೈಕ್ಷಣಿಕ ಅರ್ಹತೆಯು 10ನೇ ತರಗತಿಯನ್ನ ಪೂರ್ಣಗೊಳಿಸಿರಬೇಕು. ಆದ್ರೆ, ಅವನಿಗೆ 18 ವರ್ಷ ತುಂಬಿರಬೇಕು ಎಂಬ ಷರತ್ತಿತ್ತು. ಆದಾಗ್ಯೂ, ಈಗ 10ನೇ ತರಗತಿಯಲ್ಲಿ ಉತ್ತೀರ್ಣರಾದ ಹೊಸಬರು ಚಿಕ್ಕ ವಯಸ್ಸಿನಲ್ಲಿ ಉದ್ಯೋಗ ಪ್ರಯತ್ನಗಳನ್ನ ಮಾಡುವ ಮೂಲಕ ಆರಾಮವಾಗಿ ನೆಲೆಸಬಹುದು. ಅದ್ರಂತೆ, ಸಧ್ಯ ದಕ್ಷಿಣ ಮಧ್ಯ ರೈಲ್ವೆಯಲ್ಲಿ 10ನೇ ತರಗತಿ ಉತ್ತೀರ್ಣರಾದ, 15 ವರ್ಷ ವಯಸ್ಸಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೋದು. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 25,000 ರೂಪಾಯಿ ಸಂಬಳ ಸಿಗಲಿದೆ.